ಕಾರ್ಗಿಲ್ ಕವಿತೆ ( ಕಾರ್ಗಿಲ್ ಯೋಧರನ್ನು ನೆನೆದು)
ನಮಗೆ ನಮ್ಮ ಮನೆಗಳಲ್ಲಿ ಸೊಗದ ಊಟ ಸವಿಯ ನಿದ್ದೆ /
ನಿಮಗೆ ನಿಮ್ಮ ಮನೆಗಳಲ್ಲಿ ಕಾವ ತಾಯಿ ಕರೆವ ಮಡದಿ //
ನಾವು ನಮ್ಮ ಮನೆಗಳಲ್ಲಿ ಟೀವಿ ಮುಂದೆ ಕೂತ ಮಂದೆ /
ನೀವು ಅಲ್ಲಿ ಶಿಖರಗಳಲಿ ಅರಿಯ ತರುಬಿ ಮುಂದೆ ಮುಂದೆ//
ನಮಗೆ ನಮ್ಮ ಮನೆಗಳಲ್ಲಿ ನಾಳೆಗೆಂದೆ ಅರೆದ ಹಿಟ್ಟು /
ನಿಮಗೆ ಅಲ್ಲಿ ಕಣಿವೆಗಳಲಿ ಹಿಮದ ಗುಂಡು ಶೆಲ್ಲ ತುಂಡು//
ನಾವು ನಮ್ಮ ಕಡತಗಳಲಿ ಹಾಗು ಹೀಗು ಹಗಲ ಕಳೆಯೆ/
ನೀವು ಅಲ್ಲಿ ಬೆಟ್ಟಗಳಲಿ ನಿಮಿಷ ನಿಮಿಷ ಕಟ್ಟೆಚ್ಚರ //
ನಮಗೆ ನಮ್ಮ ತಲೆಗಳನ್ನು ಹೊದೆವ ಸೂರು ಗಟ್ಟಿ ಕಂಬ /
ನಿಮಗೆ ವ್ಯಾಘ್ರ ಬೆಟ್ಟಗಳಲಿ ಬಾನೆ ಸೂರು ಬುವಿಯೆ ಕಂಬ //
ನಮಗೆ ನಮ್ಮ ಮನೆಗಳಲ್ಲಿ ಭರತ ಮಾತೆ ಭಾವ ಚಿತ್ರ /
ನಿಮಗೆ ಅಲ್ಲಿ ಕೊರಕಲಲ್ಲಿ ಕಣಕಣವೂ ನಿಜ ಪವಿತ್ರ //
ನಾವು ನಿಮ್ಮ ಮನಗಳಲ್ಲಿ ಒಗ್ಗಟ್ಟಿನ ಒಡಲ ಅರ್ತಿ /
ನೀವು ನಮ್ಮ ಮನಗಳಲ್ಲಿ ಬಲಿದಾನದ ನಿತ್ಯ ಸ್ಫೂರ್ತಿ//
-ಮಹೇಶ್ವರಿ.ಯು
ಗಡಿಕಾಯುವವರ ಹಾಗೂ ನಮ್ಮ ಬದುಕಿನ ಚಿತ್ರಣವನ್ನು ಸ್ಥೂಲವಾಗಿ ಕಟ್ಟಿಕೊಟ್ಟಿರುವ ಕವನ ಚೆನ್ನಾಗಿದೆ ಮೇಡಂ
ಗಡಿ ಕಾಯ್ವ ಯೋಧರಿಗೆ ಮತ್ತೊಂದು ಸೊಗಸಾದ ನಮನ.
Superb. ನಮ್ಮ ಯೋಧರನ್ನು ನೆನೆದ ಪರಿ ಸೊಗಸಾಗಿದೆ.
ಅರ್ಥಪೂರ್ಣ ಬರಹ. ಧನ್ಯವಾದಗಳು
ಕಾರ್ಗಿಲ್ ಯುದ್ಧದ ವೀರ ಯೋಧರಿಗಾಗಿ ಚಂದದ ಕವಿನಮನ.
ಎಲ್ಲರಿಗೂ ಧನ್ಯವಾದಗಳು
I also remember avr soldiers we also lv u indians soldiers ❤