ನಾ ಬರೆದ ಕವನ ..
ನಾ ಬರೆದ ಕವನ
ನನ್ನದಲ್ಲ – ನನ್ನದು ಮಾತ್ರವಲ್ಲ
ನನ್ನಂತೆ ಇರುವ ಮನಸುಗಳದು
ನೋವಿಗೆ ಕಂಬನಿ ಹರಿಸುವುದ ಬಿಟ್ಟು
ನನ್ನಂತೆ ಕವನ ಕಟ್ಟಿ
ನೋವ ಮರೆಯುವ ಗುಟ್ಟು
ತಿಳಿಯದ ಮೃದು ಮನದ ಮಾನಿನಿಯರು,
ಅದಕ್ಕೆಂದೆ ನಾ ಬರೆವೆ ಕವನಗಳಾ,,,
ಈ ಕವನಗಳು ನನ್ನದಲ್ಲ
ನನ್ನದು ಮಾತ್ರವಲ್ಲ,,,
ನನ್ನ ದನಿ ನನ್ನದಲ್ಲ
” ದ್ವನಿ ” ಎತ್ತಲಾರದವರ
ಮನದಾಳದಿ ಹುದುಗಿದ ದನಿ
ನನ್ನಿಂದ ಧ್ವನಿಸುತ್ತಿದೆ
ನಿಮ್ಮ ಹೃದಯ ಮುಟ್ಟಲು
ಮನದ ಬಾಗಿಲು ತಟ್ಟುತ್ತಿದೆ
ಯಾರದೋ ಎದೆಯಾಳದ ವೇದನೆ
ಯಾರದೋ ಹೃದಯದ ಸಂವೇದನೆ
ಕವನಗಳಾಗಿ ನಿಮ್ಮದೆಯ ತಲುಪಲು
ನಿಮ್ಮ ಮನದ ಬಾಗಿಲು ತಟ್ಟುತ್ತಿದೆ
– ವಿದ್ಯಾ ವೆಂಕಟೇಶ್
ನೀವು ಬರೆದ ಕವನ ಬಹಳ ಸೊಗಸಾಗಿದೆ. ಹೌದು ಹಲವರ ಅಂತರಂಗದ ದನಿಯಾಗಿದೆ.
ಧನ್ಯವಾದಗಳು
ಅರ್ಥಪೂರ್ಣವಾಗಿದೆ ಕವನ.ಧನ್ಯವಾದಗಳು
ಮನವ ಹೊಗಲು ಎದೆ ಬಾಗಿಲು ತಟ್ಟಿದ ಸೊಗಸಾದ ಕವನ.
ಧನ್ಯವಾದಗಳು