ಜೇನು ಗೂಡಿನ ಹಂದರ
ಬದುಕು ಸುಂದರವಾಗಿ ಕಂಡರೆ
ಮದುವೆಗರ್ಥವು ಬರುವುದು
ಕೆದಕಬೇಡಿರಿ ಪತಿಯ ನೋವನು
ಮದುವೆಗರ್ಥವು ನಿಲುಕದು
ಕದಡಬೇಡಿರಿ ಮನೆಯ ಗುಟ್ಟನು
ಕೆದಕಿದಾಗಲೆ ಕೆಸರದು
ಹದವು ಮಾಡಿರಿ ಯೊಲುವೆ ಗೂಡನು
ಕದವು ದಾಟಿಯು ಹೋಗದು
ಹಲವು ಯೋಜನೆ ಸುಖದ ಭೋಜನ
ಕೆಲವು ಕಲ್ಪನೆ ಹತ್ತಿರ
ಕಲಕಬೇಡಿರಿ ಮನಸು ನಿರ್ಮಲ
ಕಲಹ *ಬದುಕಿಗೆ ದುಸ್ತರ*
ಜೋಡಿ ಹಕ್ಕಿಯ ಹಾಗೆ ಬದುಕಲು
ನೋಡೊ ಜನರಿಗೆ ಸುಂದರ
ಕೇಡು ಮಾಡದೆ ಜನರು ನಂಬಲು
ಗೂಡು ಜೇನಿನ ಹಂದರ
-ಮಧುಮತಿ ರಮೇಶ್ ಪಾಟೀಲ್
ಕವನ ಸೂಪರ್
ಸುಂದರವಾದ ಸಂದೇಶ ಹೊಂದಿರುವ ಕವನ
ಅರ್ಥಪೂರ್ಣ ಸಾಲುಗಳು
ಚಂದದ ಕವನ
ಹೌದು..ಕೆದಕದೆ, ಕದಡದೆ ಇದ್ದರೆ ಬಾಳು ಸಿಹಿಜೇನಿನ ಗೂಡು. ಚಂದದ ಕವನ.