ಹೆರಿಗೆ
ಒಮ್ಮೊಮ್ಮೆ
ಮನಸ್ಸಿನ ಗರ್ಭದೊಳಗೆ
ಭಾವಗಳ ಭ್ರೂಣ
ತಿಣುಕಾಡಿ ತಿಣುಕಾಡಿ ಕಂಗೆಡುಸುತ್ತಿದೆ
ಒಳಗೆ ಉಳಿಯಲಾರದೆ
ಹೊರಗೆ ಬರಲಾರದೆ
ಒಂಬತ್ತು ತಿಂಗಳು ಒಂಬತ್ತು ದಿನ
ತುಂಬಿದರು ಹೆರಿಗೆಯಾಗದೆ
ಕಂಗೆಟ್ಟು ಕಾಯುವ
ಬಸುರಿ ಹೆಂಗಸಿನಂತೆ
ನನ್ನ ಪಾಡಾಗುತ್ತದೆ
ಕೊನೆಗೊಂದು ದಿನ
ಅಮೃತ ಮುಹೂರ್ತದ ಕ್ಷಣ
ಭಾವ ಬೇನೆ ಹೆಚ್ಚಾಗಿ
ಇನ್ನು ಇರಲಾರೆ ಎನ್ನುತ
ಕವನದ ಮಗು ಜನಿಸಿ
ಕಾಗದದ ತೊಟ್ಟಿಲಲ್ಲಿ ಮಲಗಿಸಿ
ನನ್ನ ಕೂಸನು ಕಂಡು
ನಾ ಸಂಭ್ರಮಿಸಿ
ಹೆರಿಗೆಯಾದ ಈ ಸುದಿನ
ಧನ್ಯಳಾದೆ ಎಂದಿತು ನನ್ನ ಮನ.
– ವಿದ್ಯಾ ವೆಂಕಟೇಶ್
ಕವನದ ಆಗಮನಕ್ಕೆ ಚಂದದ ಚಿಂತನೆ.ಹೆತ್ತವರಿಗೇ ಗೊತ್ತು ಅದರನೋವು ಎನ್ನುವಂತೆ, ಬರೆಯುವವರಿಗೇ ಗೂತ್ತು ಅದರ ಬವಣೆ.ಚೆನ್ನಾಗಿದೆ ನಿಮ್ಮ ಕಲ್ಪನೆ.ಸೋದರಿ.ಅಭಿನಂದನೆಗಳು.
ಧನ್ಯವಾದಗಳು ಅಕ್ಕಾ
ಸೊಗಸಾಗಿದೆ
ಮನದೊಳಗೆ ಥಿಂಕ್ ಥೈ ಥೈ ಥೈ ಎಂದು ಕುಣಿಯುವ ಭಾವಗಳ ಚಿತ್ರಣ ಸೊಗಸಾಗಿದೆ
ಹೆರುವವರಿಗೆ ಗೊತ್ತು ನೋವಿನ ಅನುಭವ
ಹೆತ್ತ ಮೇಲೆ ತಿಳಿವುದು ಕವನದ ಮಗುವಿನಿಂದಾದ ಆನಂದ
ಅರ್ಥಪೂರ್ಣವಾಗಿದೆವಕವನ.ಧನ್ಯವಾದಗಳು
ಭಾವನೆಗಳನ್ನು ಹೆತ್ತು, ಕಾಗದದ ತೊಟ್ಟಿಲಲ್ಲಿಟ್ಟು ತೂಗಿದ ಪರಿ ಬಹಳ ಸೊಗಸಾಗಿದೆ ಮೇಡಂ.