ದುಷ್ಟರ ಕಂಡರೆ ದೂರವಿರಿ…
ಒಬ್ಬ ವ್ಯಕ್ತಿ ತನ್ನ ಬೈಕಿನಲ್ಲಿ ಯಾವುದೋ ಕೆಲಸದ ಮೇಲೆ ವೇಗವಾಗಿ ಹೊರಟಿದ್ದ. ದಾರಿಯಲ್ಲಿ ಒಂದು ಕಲ್ಲು ಬಿದ್ದಿರುವುದನ್ನು ಆತ ಗಮನಿಸಿದರೂ ಭಂಡ ಧೈರ್ಯದಿಂದ ಕಲ್ಲಿನ ಮೇಲೆ ಬೈಕನ್ನು ಚಲಾಯಿಸಿದ. ಬೈಕು ಕಲ್ಲಿಗೆ ಹೊಡೆದ ವೇಗಕ್ಕೆ ಆ ವ್ಯಕ್ತಿ ಬೈಕಿನಿಂದ ಜಿಗಿದು ಕೆಳಗೆ ಬಿದ್ದನು.
ಸಣ್ಣ ಪುಟ್ಟ ಗಾಯಗಳಿಂದ ಪರಾದ ಅವನು ಎದ್ದು ಬೈಕು ಸರಿ ಮಾಡಿಕೊಂಡು ಹೊರಟಾಗ ಅಲ್ಲೇ ನಿಂತಿದ್ದ ಹಿರಿಯ ಜೀವವೊಂದು ಅವನ ಬಳಿ ಬಂದು, ” ನೋಡಪ್ಪ ಆ ಕಲ್ಲು ನೋಡಿದ್ಯಲ್ಲ ಅದು ನಮ್ಮ ಬದುಕಿನಲ್ಲಿ ಬರುವ ದುಷ್ಟರ ಹಾಗೇ ನಮಗೆ ಗೊತ್ತಿಲ್ಲದೆ ನಮ್ಮ ದಾರಿಗೆ ಅಡ್ಡವಾಗಿ ಬಂದು ಬಿಡುತ್ತಾರೆ. ಅವರಿಂದ ಆದಷ್ಟು ದೂರವಿದ್ದರೆ ನಮಗೆ ಯಶಸ್ಸು ಸಿಗುತ್ತದೆ, ಹೋಗುವ ದಾರಿಯಲ್ಲಿ ಯಾವುದೆ ತೊಂದರೆ ಎದುರಾಗುವುದಿಲ್ಲ ಅದೇ ನಾವು ಭಂಡ ಧೈರ್ಯದಿಂದ ದುಷ್ಟರನ್ನು ಎದುರಿಸಲು ನಿಂತರೆ ಅದರಿಂದ ನಷ್ಟವಾಗುವುದು ನಮಗೆ. ಈ ಘಟನೆ ನಿನ್ನ ಬದುಕಿನಲ್ಲಿ ಒಂದು ಪಾಠವಾಗಲಿ.. ದುಷ್ಟರಿಂದ ದೂರವಿರು. ” ಎಂದು ಹೇಳಿ ಅಲ್ಲಿಂದ ಹೊರಟು ಹೋದರು..
ನಮ್ಮ ಬದುಕಿನ ಪಯಣದಲ್ಲಿ ನಮಗೆ ಗೊತ್ತಿಲ್ಲದೆ ಹಲವು ಅಡೆ ತಡೆಗಳನ್ನು ಅನುಭವಿಸುತ್ತೇವೆ. ಹಲವು ದುಷ್ಟ ಶಕ್ತಿಗಳು ನಮಗೆ ಎದುರಾಗಬಹುದು. ಆದಷ್ಟು ದುಷ್ಟರಿಂದ ದೂರವಿದ್ದರೆ ನಮಗೆ ಒಳಿತು…
-ರಾಜೇಶ್ ಜಾಧವ್
ಉತ್ತಮ ಸಂದೇಶ
ಬಹಳ ಅಮೂಲ್ಯ ವಾದ ಸಲಹೆ ತಿಳಿದು ನಡೆದರೆ ಒಳಿತು.ಚಿಕ್ಕಚೊಕ್ಕದಾದಲೇಖನ.ಅಭಿನಂದನೆಗಳು ಸಾರ್.
ಆಳವಾದ ಸಂದೇಶವನ್ನು ಹೊತ್ತ ಚಿಕ್ಕ ಚೊಕ್ಕ ಕಥೆ ಚೆನ್ನಾಗಿದೆ.