ಕಿರುಗತೆ : ಗಡ್ಡ
ಸ್ವಾಮೀಜಿಗಳು ಎಲ್ಲ ಮೋಹಗಳನ್ನೂ ಬಿಟ್ಟವರು. ಎಲ್ಲ ಆಡಂಬರಗಳನ್ನೂ ತೊರೆದವರು. ಸುಖ ವ್ಯರ್ಜಿಸಿದವರು. ಅವರು ತಮ್ಮ ಶಿಷ್ಯರುಗಳಲ್ಲಿಯೂ ಈ ಗುಣವಿರಬೇಕೆಂದು ಬಯಸುತ್ತಿದ್ದವರು.
ಒಂದು ಸಲ ಅವರ ನೀಳ ಗಡ್ಡದ ಬುಡದಲ್ಲಿ ಸಣ್ಣ ಗಡ್ಡೆಯಂಥದು ಕಾಣಿಸಿಕೊಂಡಿತು. ಗಡ್ಡ ನೀವುವಾಗ ಅದು ಅವರ ಕೈಗೆ ತಾಕುತ್ತಿತ್ತು. ಅದು ದೊಡ್ಡದಾದರೆ ಸಮಸ್ಯೆಯಾದೀತು ಎಂದೆನಿಸಿತು. ವೈದ್ಯರೊಬ್ಬರನ್ನು ಭೇಟಿಮಾಡಿದರು. ವೈದ್ಯರು ʼಸಣ್ಣ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಬಹುದು. ಶಸ್ತ್ರಚಿಕಿತ್ಸೆಗೆ ಗಡ್ಡ ತೆಗೆಯಬೇಕು. ಅದನ್ನು ತೆಗೆದು ಮುಂದಿನ ವಾರ ಬನ್ನಿʼ ಅಂದರು.
ಆಶ್ರಮಕ್ಕೆ ಹಿಂತಿರುಗಿದ ಸ್ವಾಮೀಜಿ ತಮ್ಮ ನವಿರು ಗಡ್ಡ ನೀವುತ್ತಾ ಚಿಂತಿಸಿದರು. ʼಈ ಗಡ್ಡದಿಂದ ತಾನು ಗಂಭೀರನೂ ಮತ್ತು ತೇಜಸ್ವಿಯಾಗಿಯೂ ಕಾಣುತ್ತಿದ್ದೇನೆ ಅಲ್ಲವೆ?ʼ
ಎರಡು ದಿನ ಅವರಿಗೆ ನಿದ್ರೆಯೇ ಬರದು. ʼಅಯ್ಯೋ! ಇಷ್ಟು ಚೆಂದದ ಗಡ್ಡ ತೆಗೆಯಬೇಕೆ? ಗಡ್ಡೆ ಇದ್ದರೆ ಇರಲಿ. ಗಡ್ಡದ ಮರೆಯಲ್ಲಿ ಗಡ್ಡೆ ಇರತ್ತೆ. ಯಾರಿಗೂ ಕಾಣಿಸಲ್ಲವಲ್ಲ! ಗಡ್ಡ ತೆಗೆಯೋದು ಬೇಡʼ.
ಹೀಗೆ ಗಟ್ಟಿ ನಿರ್ಧಾರ ಮಾಡಿದಮೇಲೆ ಅವರಿಗೆ ಒಳ್ಳೆ ನಿದ್ರೆ ಬಂತು.
– ಅನಂತ ರಮೇಶ್
ಚಂದದ ಕಥೆ.ಅಭನಂದನೆಗಳು ಸಾರ್
ಧನ್ಯವಾದಗಳು.
ಚೆನ್ನಾಗಿದೆ ಬರಹ
ಧನ್ಯವಾದಗಳು.
ಚೆನ್ನಾಗಿದೆ
ಗಡ್ಡವನ್ನು ಬಿಟ್ಟರೂ ಅದರ ಮೇಲಿನ ಮೋಹ ಬಿಡಲಿಲ್ಲ! ಕಾರಣ : ಗಡ್ಡವನ್ನು ಬೆಳೆಯಲು ಬಿಟ್ಟರಷ್ಟೇ ಹೊರತು ಗಡ್ಡ ಬೇಡ ಎಂದು ಬಿಟ್ಟದ್ದಲ್ಲ!!
ಅಭಿಪ್ರಾಯಕ್ಕೆ ಧನ್ಯವಾದಗಳು. 🙂
ಸ್ವಾಮೀಜಿಗಳೂ ಬಾಹ್ಯ ಸೌಂದರ್ಯದ ಮೋಹವನ್ನು ಬಿಟ್ಟಿಲ್ಲವಲ್ಲ..!! ಸೊಗಸಾಗಿದೆ ಪುಟ್ಟ ಕಥೆ.
ಧನ್ಯವಾದಗಳು.