ನಿಲ್ಲದಿ ಹೆಣ್ಣಿನ ದಮನ
ಬರೆದರೆಷ್ಟೊ ಜನ
ಬರೆದರೆಷ್ಟೋ ಸಾಹಿತ್ಯ
ಕತೆ – ಕವನ – ಲೇಖನ
ಆದರೂ ನಿಲ್ಲಲಿಲ್ಲ
ಹೆಣ್ಣಿನ ಅಸ್ತಿತ್ವಕ್ಕೆ ಅವಮಾನ
ಎಲ್ಲೆಲ್ಲೂ ಹೆಣ್ಣಿನ ಪ್ರಗತಿಗೆ
ಹೊಸ ಹೊಸ ವಿಚಾರ,ಚರ್ಚೆ,
ಅದರೂ ತಪ್ಪಲಿಲ್ಲ
ಹೆಣ್ಣಿನ ಮೇಲಿನ ಅತ್ಯಾಚಾರ,
ಹೆಣ್ಣಿನಿಂದೆಲ್ಲವನ್ನು
ಪಡೆಯುತ್ತಾರೆ,
ಮತ್ತೆ ಮುಂದುವರಿಯದಂತೆ
ತಡೆಯುತ್ತಾರೆ,
ಬೆಳೆಯದಂತೆ
ಬಂಧಿಸಿಡ ಬಯಸುತ್ತಾರೆ,
ಬರೆಯುತ್ತಲೇ ಇರುತ್ತಾರೆ ಜನ
ಶತ ಶತಮಾನಗಳುರುಳಿದರು
ನಿಲ್ಲದೀ ಹೆಣ್ಣಿನ ದಮನ
-ವಿದ್ಯಾ ವೆಂಕಟೇಶ್
ಸತ್ಯಸ್ಥಸತ್ಯ ಹೆಣ್ಣಿನ ಶೋಷಣೆ ನಿರಂತರ . ಆದರೀಗ ಹಲವಾರು ಕಡೆ ಪುರುಷ ಪೋಷಣೆ ಯೂ ನೆಡೆಯುತ್ತಿದೆ ಹೇಳಿಕೊಳ್ಳಲಾಗದ ಬೇಗುದಿ.ಚಂದದ ಕವನ ಗೆಳತಿ ಅಭಿನಂದನೆಗಳು.
ಹೆಣ್ಣಿನ ಮೇಲೆ ಈ ದೌರ್ಜನ್ಯ ಯಾವ ಕಾಲಕ್ಕೂ ನಿಲ್ಲದೇನೋ. ಚೆನ್ನಾಗಿದೆ ಕವನ
ಧನ್ಯವಾದಗಳು
ವಂದನೆಗಳು
ಧನ್ಯವಾದಗಳು ಮೇಡಂ
Very nice
ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಹೆಣ್ಣಿನ ಬಾಳಿನ ಸಂಕಷ್ಟಗಳನ್ನು ಯಥಾವತ್ತಾಗಿ ಚಿತ್ರಿಸಿದ ಕವನ ಮನಮುಟ್ಟಿತು.