ನೆನಪಿನಾಳದಿಂದ…
ಸುಮಾರು 49 ವರ್ಷಗಳ ಹಿಂದೆ ನಾನು ಕುಂದಗೋಳದ ಹರಭಟ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವಾಗ (ಪ್ರಥಮ ಪಿ.ಯು.ಸಿ) ವಿಶ್ಧಾವ ಹಿಂದೂ ಪರಿಷತ್ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ನಿಬಂಧ ಸ್ಫರ್ಧೆಯಲ್ಲಿ ಶ್ರೀ ಅರವಿಂದರ ಕುರಿತು ಬರೆದ ನಿಬಂಧಕ್ಕೆ ದ್ವಿತೀಯ ಬಹುಮಾನ (ರೂ 25/-) ಬಂದಿತ್ತು. ಬಹುಮಾನ ಪಡೆದುಕೊಳ್ಳಲು ನನ್ನ ಕಾಲೇಜು ಬೋಧಕರ ಜತೆಗೆ ಹುಬ್ಬಳ್ಳಿಗೆ ಹೋಗಿದ್ದೆ,ಆಗ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದು ಛಂದಾಗಿ ಭಾಷಣ ಮಾಡಿ ನಂತರ ಬಹುಮಾನ ವಿತರಿಸಿದವರು ಯಾರು ಗೊತ್ತೆ?-–ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ಡಾ.ದ ರಾ ಬೇಂದ್ರೆಯವರು.
ಇವರ ಅಮೃತ ಹಸ್ತದಿಂದ ಬಹುಮಾನ ಪಡೆದದ್ದೇ ನನಗೆ ಕವಿತೆ ಬರೆಯುವ ಆಸಕ್ತಿ ಹೆಚ್ಚಿಸಿದಂತಾಗಿದೆ…ಆಗ ಅವರಿಂದ ಬಹುಮಾನದ ಹಣ ಪಡೆದು ಅದರಲ್ಲಿ 3 ರೂ ಖರ್ಚು ಮಾಡಿ ಬಾಲ್ಕನಿ ಟಿಕೆಟ್ ಪಡೆದು ಆತ್ಮೀಯ ಮಿತ್ರನೊಡನೆ ಹತ್ತಿರದಲ್ಲೇ ಇದ್ದ ಒಂದು ಹಳೆಯ ಚಿತ್ರ ಮಂದಿರದಲ್ಲಿ (ಗಣೇಶ) ರಾಜಕುಮಾರರ ‘ಪ್ರತಿಧ್ವನಿ’ ನೋಡಿ ಖುಷಿಪಟ್ಟೆ…
ಜನವರಿ 31 ರಂದು ಅವರ 125ನೇ ಜನ್ಮದಿನ, ತನ್ನಿಮಿತ್ತ ಈ ನೆನಪು ಹಂಚಿಕೊಳ್ಳುತ್ತಿದ್ದೇನೆ. ಸಮಾರಂಭದ ಫೋಟೋ/ಚಿತ್ರಗಳಿಲ್ಲದಿರುವದು ಬೇಸರದ ಸಂಗತಿ, ಅದು ಮೊಬೈಲ ಯುಗವೂ ಆಲ್ಲ, ಮೊಬೈಲ್ ಇದ್ದರೆ ಸೆಲ್ಫಿ ತೆಗೆಸಿಕೊಂಡು ಅದೆಷ್ಟು ಬೀಗುತ್ತಿದ್ದೆನೋ!
“ಈ ವರಕವಿಗೆ ಗೌರವದ ನಮನಗಳು”.
-ಮಾಲತೇಶ ಎಂ ಹುಬ್ಬಳ್ಳಿ
ಸುಂದರ ನೆನಪುಗಳ ಬರಹ.
ಧನ್ಯವಾದಗಳು ಸರ್
ವರಕವಿಯ ಜೊತೆ ಬಹುಮಾನ ಪಡೆದ ಖುಷಿ ಹಂಚಿ ಕೊಂಡಿದ್ದು ನಮಗು ಖುಷಿನೆ ಸರಿ..
ಧನ್ಯವಾದಗಳು
ಅದೃಷ್ಟವಂತರು ಸರ್ ನೀವು
ಹೌದು ಮೇಡಮ್
ವಾವ್ ಅವರ ಬರವಣಿಗೆಯ ಮೂಲಕ ಪರಿಚಯ ಹೊಂದಿರುವ ನನಗೆ ನೀವು ಅವರ ಕೈಯಲ್ಲಿ ಬಹುಮಾನ ಪಡೆದಿರುವ ನೆನಪು ಹಂಚಿಕೊಂಡಿದ್ದೀರಾ.ಅಭನಂದನೆಗಳು ಸಾರ್.
..
ಧನ್ಯವಾದಗಳು
ಮಹಾನ್ ಕವಿ ದ.ರಾ. ಬೇಂದ್ರೆಯವರ ದಿವ್ಯ ಹಸ್ತದಿಂದ ಬಹುಮಾನ ಪಡೆದ ನೀವೇ ಧನ್ಯರು ಸರ್.
ಫಲವತ್ತಾದ ಭೂಮಿಯಲ್ಲಿ ಬೀಜ ಬಿತ್ತಿದರೆ ಉತ್ತಮ ಫಲ ದೊರೆಯುತ್ತದೆ. ನಿಮಗೆ ಬೇಂದ್ರೆಯವರ ಕೈಯಲ್ಲಿ ಬಹುಮಾನ ಸಿಕ್ಕಿದ್ದು ಹಾಗೇ ಆಯಿತು. ಒಳ್ಳೆಯ ಪ್ರತಿಫಲ ಸಿಕ್ಕಿತು