ಎರಡು ಮಾತುಗಳು
ಒಂದು ಮಾತು
ಮನಸ್ಸುಗಳ ಮಧ್ಯೆ
ಆಳೆತ್ತರದ ಗೋಡೆ ಕಟ್ಟುತ್ತದೆ
ಇನ್ನೊಂದು ಮಾತು
ಮನಸ್ಸುಗಳ ನಡುವಿನ ಕಂದರಕ್ಕೆ
ಸೇತುವೆಯಾಗುತ್ತದೆ
ಒಂದು ಮಾತು
ದ್ವೇಷದ ಕಿಚ್ಚು ಹಚ್ಚಿ
ಮನಸ್ಸುಗಳನ್ನು ಸುಡುತ್ತದೆ
ಇನ್ನೊಂದು ಮಾತು
ಪ್ರೀತಿಯ ಮಳೆಗರೆದು
ಬೆಂದ ಮನಸ್ಸುಗಳಿಗೆ ತಂಪರೆಯುತ್ತದೆ
ಒಂದು ಮಾತು
ಗೌರೀಶಂಕರದ ಉತ್ತುಂಗಕ್ಕೇರಿಸುತ್ತದೆ
ಇನ್ನೊಂದು ಮಾತು
ತಳ ಕಾಣದ ಪ್ರಪಾತಕ್ಕೆ ತಳ್ಳಿ
ಆಳ ನೋಡುತ್ತದೆ
-ಕೂದುವಳ್ಳಿ ರಾಮನಾಥ್
ಮಾತು ಹೇಗಿರಬೇಕು ಎಂಬ ವಾಸ್ತವ ಸಂಗತಿ ಈ ಪುಟ್ಟ ಕವನದಲ್ಲಿ ಬಿತ್ತರಿಸಿದ್ದಾರೆ.ಅಭನಂದನೆಗಳು ಸಾರ್.
ಆಡುವ ಮಾತಿನ ಮಹತ್ವ, ಮಾತಿನ ಬೆಲೆ ಏನು ಅನ್ನುವುದನ್ನು ಅರುಹುವ ಕವನ
ಮಾತು ಮುತ್ತಿನಂತಿರಬೇಕು ಎಂದು ಶರಣರ ವಚನವು ಹೇಳುತ್ತದೆ. ಕೆಟ್ಟ ಮತ್ತು ಒಳ್ಳೆಯ ನುಡಿಗಳ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಮೂಡಿಸಿರುವ ಕವನವು ಬಹಳ ಚೆನ್ನಾಗಿದೆ.
ಒಳ್ಳೆಯ ನೀತಿಯುಕ್ತ ಪುಟ್ಟ ಕವನ.
ಪ್ರತಿ ಮಾತಿನ ಪರಿಣಾಮಗಳು ಒಂದಲ್ಲ ಒಂದು ಸಂಕಟ ಅಥವಾ ನೋವನ್ನುಳಿಸುವುದು . ಕವನ ತುಂಬ ಚೆನ್ನಾಗಿದೆ.