ಮೇರು_ಕನಕ
ವ್ಯಾಸರು ಮೆಚ್ಚಿದ
ದಾಸರ ಪಂಕ್ತಿಯ
ಮೋಸವನರಿಯದ ಮುಗ್ಧರಿಗೆ
ತೋಷದಿ ಪರೀಕ್ಷೆ
ದಾಸರುವಿಟ್ಟರು
ಬೇಸರ ತೋರಿದ ಶಿಷ್ಯರಿಗೆ||
ಬಾಳೆಯ ಫಲವನು
ಕಾಳಗೆ ಕಾಣದೆ
ಕಾಳಜಿಯಿಂದಲಿ ಸವಿರೆಲ್ಲ
ಕಾಳನುವಿಲ್ಲದ್
ಸ್ಥಳವದುವಿಲ್ಲವು
ಹೇಳಿದ ಸುಂದರ ಜಗಮಲ್ಲ||
ಬಚ್ಚಮ ತನಯನು
ಕೆಚ್ಚೆದೆ ಶೂರನು
ಹೆಚ್ಚಿತು ಕೀರ್ತಿಯು ಮನೆತನದು
ರೊಚ್ಚಿಗೆ ಬರುವನು
ಚುಚ್ಚುತ ವೈರಿಯ
ಕೊಚ್ಚುತ ಚಣದಲಿ ಮಧಿಸುವನು||
ತಿಮ್ಮಪ್ಪ ವರನಿವ
ತಿಮ್ಮಪ್ಪ ನಾಯಕ
ಬಿಮ್ಮಿನ ಬೀರಪ್ಪ ಸುಪುತ್ರನು
ಸುಮ್ಮನೆ ಕೆಣಕುವ
ಹಮ್ಮಿನ ಹಗೆಗಿವ
ಗುಮ್ಮನ ತರದಲಿ ಕಾಡುವನು ||
ರಾಮನ ಧಾನ್ಯದ
ನೇಮವ ಪೊಗಳಿದ
ಧಮಯಂತಿ ನಳರ ಕೃತಿರಚಿಸಿ
ರಾಮನ ಭಕ್ತನು
ತಾಮಸ ಗುಣದವ
ನಾಮದಿ ಕನಕವ ನೀ ಗಳಿಸಿ||
-ಶ್ರೀ ಈರಪ್ಪ ಬಿಜಲಿ
ಸಂಪಾದಕೀಯ ಮಂಡಳಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಸರ್
ಚೆನ್ನಾಗಿದೆ
ಕನಕದಾಸರ ಬಗೆಗಿನ ಸೊಗಸಾದ ಸಕಾಲಿಕ ಕವನ..ಧನ್ಯವಾದಗಳು.
ಸುಂದರವಾದ ಕವನ. ಕನಕನ ವರ್ನನೆ ಅದ್ಬುತ