ಮಿಸುಗಾಟ
ಮಂಜು ನಗಲಿ,
ಮಳೆ ಬರಲಿ,
ಹರುಷ ಉಕ್ಕಲಿ ಬಾಳಲಿ,
ದುಗುಡ ದುಮ್ಮಾನ ದೂರಾಗಲಿ,
ಒಂಟೊಂಟಿಗೆ ಜತೆ ಸಿಗಲಿ,
ಆಸೆ ನೂರಾಗಲಿ,
ಸಂತಸ ಹೊಳೆಯಾಗಲಿ,
ಬಿಗಿದ ಹಣೆಗಂಟು ಸಡಿಲಿಸಲಿ,
ಅನುಮಾನಗಳಿಗೆಲ್ಲ ಸತ್ಯ ಧುತ್ತನೇಳಲಿ,
ಮತ್ತೊಂದು ಹೊಸ ಕಾಲಮಾನದಲಿ,
ನಮ್ಮ ಖುಷಿ ನಮ್ಮೊಂದಿಗೆ ಮರಳಲಿ…
ಹೊಸ ಹುಮ್ಮಸ್ಸು ಹೊತ್ತು ಹೃದಯ ನರಳಲಿ,
ಉರಿಕೆಂಡವು ಅಳಿದು ಕೆಂದಾವರೆ ಅರಳಲಿ,
ಒಮ್ಮತ ಸೂತ್ರವು ಬೆಳೆದು ಬಾಳಲಿ,
ಉಸಿರುಗಟ್ಟಿಸುವೆಡೆ ಹಸಿರು ಮಸೆಯಲಿ,
ಸೂತಕದ ಮಡುವಿನಲಿ ಶಾಶ್ವತತೆ ಹುಟ್ಟಲಿ,
ಅಮ್ಮನ ಭಾಷೆ, ಅನ್ನದ ಭಾಷೆಯಾಗಲಿ,
ದ್ವೇಷ ವಿಷ ಬೀಜ ಅಡಗಲಿ
-ನಳಿನ ಡಿ, ಬೆಂಗಳೂರು
ಚಂದದ ಕವಿತೆ
Thank you sir
ಚೆನ್ನಾಗಿದೆ ಕವನ.
ಒಳ್ಳೆಯ ಕವನ
ಸುಪರ್
ಕೆಟ್ಟದ್ದೆಲ್ಲಾ ಅಳಿದು , ಹೊಸದಾಗಿ ಒಳ್ಳೆಯದು ಹುಟ್ಟಿಬರುವ ಭರವಸೆ , ಆಶಾಭಾವನೆ ಹೊತ್ತ ಕವನ ಚೆನ್ನಾಗಿದೆ.
Nice kavithe
ಹೊಸ ಹುಮ್ಮಸ್ಸು ಹೊತ್ತು ಹೃದಯ ಮಿಸುಗಲಿ…
(ಅಥವಾ ಹೊಮ್ಮಿ ಬರಲಿ)
ಸುಂದರ ಭಾವದ ಕವಿತೆ.
ಕವನ ಚೆನ್ನಾಗಿದೆ