ಆತ್ಮದೀಪ
ಪ್ರೀತಿಸುವದಿಲ್ಲ ಯಾವುದನ್ನೂ
ಪ್ರಜ್ವಲಿಸುವೆ ಈ ನೆಲದ ಆತ್ಮದೀಪವಾಗಿ
ಬಯಸುವುದು ಜಗತ್ತು ಎಲ್ಲಿಯವರೆಗೆ
ನೀಡುವೆನು ಬೆಳಕನು ಅಲ್ಲಿಯವರೆಗೆ
ತೆರೆದರೆ ಜ್ವಾಲೆಯ ಬಾಗಿಲು
ಕುರುಡಾಗುವವು ವಿಶ್ವದ ಕಣ್ಣುಗಳು
ಛಿದ್ರತೆಯಲಿ ಬೆರಗುಗೊಂಡ ನೋಟ
ನಂದಿಸಿ ಜ್ವಾಲೆಯನು, ನಿರಾಕರಣೆಯಿಲ್ಲ
ಪರಿಗಣಿಸಿರಿ ಆ ಜೀವನವನು ಮಾತ್ರ
ಅರಿಯಿರಿ ಅಂತರವ ಮಣ್ಣಿನ ದೀಪಗಳಲಿ
ಸಾಲ ನೀಡಿದೆ ಪ್ರಕೃತಿ ಬದುಕಲು ಇಲ್ಲಿ
ಮಾನಾಭಿಮಾನದ ಜೀವಂತ ದೀಪವಾಗಿ
ಯೋಚಿಸಿರಿ ಒಂದು ಕ್ಷಣ…
ಸಹಾಯ ಹಸ್ತ ಚಾಚುವ ಮುನ್ನ
ವ್ಯಕ್ತಪಡಿಸದಿರಿ ವಿಷಾದವನು ಹಿಂದಿನಿಂದ
ನಂದಿಸಿರಿ, ಎರಡನೇ ಬಾರಿ ಸುಡದಿರುವ ಹಾಗೆ
-ರಾಘವೇಂದ್ರ ದೇಶಪಾಂಡೆ, ಹೊಸಪೇಟೆ
Nice one
ಅರ್ಥವತ್ತಾದ ಕವನ ಇಷ್ಟವಾಯಿತು
ನಿಸ್ವಾರ್ಥ ಕರ್ಮದಲಿ ಆತ್ಮಜ್ಯೋತಿ ಬೆಳಗಿಸಿದ ಚಂದದ ಕವಿತೆ.