ಒಂದು ಕಿರಣ..
ಖಾಲಿ ಕೂತ ಘಳಿಗೆಗಳಲಿ
ದುಬಾರಿ ವಸ್ತುಗಳು
ಅಲುಗಾಡದಂತೆ ಕಾಯುವ
ಬೆಂಡಿನ ತುಂಡಿನಂತೆ
ಕೆಲಸವಾದಾಕ್ಷಣ ಬಿಸುಟರೆ
ತಿಪ್ಪೆರಾಶಿಯಲಿ ತುಂಬ ದೂರದಿಂದಲೂ
ಕಾಣಬಹುದಾದ ಕಸದಂತೆ
ಈ ಬದುಕು
ಯೋಚನೆ,ಯಾತನೆಗಳಿಲ್ಲದೆಯೂ
ಮೂಲೆಯೊಂದರಲಿ
ಕಣ್ಣುಮಿಟುಕಿಸುತ್ತಲೇ
ಸುಸ್ತಾಗುವ ದೇಹ
ಖರ್ಚಾಗುವ ಬ್ಯಾಟರಿ
ಕಾಫಿ, ನೀರು, ಚಹಾಗಳು
ಒಂದು ಕರೆ
ಒಂದೇ ಕಿರಣ
ಒಂದು ಆಸೆಕಿಡಿ
ಜಡಕೆ ಹಚ್ಚುವ ಬೆಂಕಿ
ಆತ್ಮ ಬೆಳಗುವುದು
ಅದೇ ಆಗಸ, ಭಾನು, ಭುವಿ
ಎಷ್ಟು ಹೊಸತು
ಹಕ್ಕಿ ಕಲರವ
ಲೌಕಿಕದ ಲೇವಾದೇವಿ
ಎಷ್ಟು ಕಡಿಮೆ
ಈ ಸಮಯ
ಈ ನೋವು-ನಲಿವು
ಇಷ್ಟೊಂದು ಆಯುಷ್ಯಕ್ಕೆ
-ಎಸ್ ನಾಗಶ್ರೀ
Well expressed, anguish inside in minimum words! Love her poetry.
Jayashree.
Thank you
ಜಡಕೆ ಹಚ್ಚುವ ಬೆಂಕಿ
ಆತ್ಮ ಬೆಳಗುವುದು
ಚೆಂದ ಕವಿತೆ..
ಧನ್ಯವಾದಗಳು
ಸುಂದರವಾದ ಕವನ.
ಧನ್ಯವಾದಗಳು
ಇಷ್ಟ ಆಯಿತು ಪದ್ಯ,ನಾಗಶ್ರೀ
ಥ್ಯಾಂಕ್ಯೂ ಸ್ಮಿತಾ
ಸೊಗಸಾದ ಭಾವಲಹರಿ.
ಧನ್ಯವಾದಗಳು