ಸೋರುಗಲ್ಲದ ಚಂದ್ರಮ
ಹಾಲುಗಲ್ಲದ ಚಂದ್ರಮಗೆ ಸೋರುವ ಹುಣ್ಣೆ?
ರಕ್ತ ಲಸಿತ ಬೆಳದಿಂಗಳೆ ಈ ಬನದಲ್ಲಿ?
ಎಷ್ಟು ಮುದ್ದಾಗಿದ್ದಾನೆ ಈ ಸೋರುಗಲ್ಲದ ಚಂದ್ರಮ!
ಬಿಮ್ಮಗೆ ಬಿಗಿವ ಕಡಲಮುಸುಡಿಗೆ
ಮಂಗಳಾರತಿ ಬೆಳಗತಕ್ಕವನೆ ಈತ!
ಅಲ್ಲಲ್ಲ, ಅವನ ಹಿಂದೆ ಮುಂದೆಯೆ
ಉರಿವ ಮತ್ಸರದ ಮಡದಿಯರು
ಶಪಿತ ಕೆನ್ನೆಗೆ ಮುತ್ತುಗಳ ಮಳೆ ಜಡಿದು
ಅಲ್ಲ , ಮುತ್ತುಗಳ ಮೊಳೆ ಹೊಡೆದು
ಇಷ್ಟಿಷ್ಟು ಇಷ್ಟಿಷ್ಟು ಗಡಿ ಹಾಕಿಕೊಂಡವರು
ಅರೆಯುತ್ತಿದ್ದಾರೆ ಅಲ್ಲಿ ಯಾರು ಯಾವ ಮೂಲೆಯಲ್ಲಿ?
ಪಾಪ ತಾಯಿ!
ಕಂದನ ಸೋರುಗಲ್ಲಕೆ ಯಾವ ಕರುಳ ಮದ್ದು?
-ಮಹೇಶ್ವರಿ.ಯು, ಕಾಸರಗೋಡು
ವಾವ್ ಸುಂದರ ಕಲ್ಪನೆ.ಅಭಿನಂದನೆಗಳು.
Nice one
ವಿಶೇಷ ರೂಪದ ಪರಿಕಲ್ಪನೆ! ಮುದ್ದಾದ ಹುಣ್ಣಿಮೆಚಂದ್ರ ಗೊತ್ತು…ಸೋರುಗಲ್ಲದ ಚಂದ್ರಮ..ವಾಹ್…ಚೆನ್ನಾಗಿದೆ.