ಅಕ್ಷರಮಾಲೆ
ಅ ಎಂಬ ಅಕ್ಷರವು ಮೊದಲ ಲೀಲೆ
ಆಕಾಶ ತೆರದಿತ್ತೊ ಮೇಘ ಮಾಲೆ
ಇಂದಿನನುಭವವೆ ನಾಳೆಗಿತಿಹಾಸ
ಈ ಕ್ಷಣವೆ ನಿನ್ನದಿದು ಮಾಡದಿರು ಹ್ರಾಸ
ಉನ್ನತದ ಗಿರಿಶಿಖರ ಏರುವುದಕೂ ಮೊದಲು
ಊರು ಹೆಜ್ಜೆಯ ನೀನು ನಿಂತ ನೆಲದಲ್ಲಿ
ಎರಡಾಗಿ ತೋರುತಿಹ ಬಾಳಿನಲಿ ಇಹುದೊಂದೆ
ಏಕ ಭಾವದಿ ಬೆರೆತವಗೆ ಕಾಂಬುದೊಂದೇ
ಐಸಿರಿಯ ಹಂಗಿಗಗೆ ಲಕ್ಷದೊಂದೇ
ಒಜ್ಜೆ ಯೆನಿಸದು ಬಾಳು ಹಜ್ಜೆಯರಿತವಗೆ
ಓಗೊಡುವ ಅಂಬಿಗನ ಜಾಡು ತಿಳಿದವಗೆ
ಔಷಧಿಯು ಬೇರಿಲ್ಲ ಭವರೋಗಕೆ
ಅಂಧಕಾರದ ಅಹಮಿಕೆಯ ಬೇರ ಕಿತ್ತೊಗೆವುದೆ
ಅ: ಅಕ್ಷರದ ಮಾಲೆಯಿದು ಮುಡಿಯಲಿರಲಿ
-ಮಹೇಶ್ವರಿ. ಯು
ಅಕ್ಷರಮಾಲೆಯಲ್ಲಿ ಮೂಡಿದ ಕವನ
ಮುಡಿಗೇರಿಸಲು ಸಿದ್ಧವಾಗಿರುವ ಸೊಗಸಾದ ಅಕ್ಷರ ಮಾಲೆ….ಚಂದದ ಕವನ.