ನಾಳೆಗಳ ಹೊಸ್ತಿಲಲ್ಲಿ…….
ಈ ಪರ್ವದ ನಾಳೆಗಳ ಉಸಿರು
ಕಾಲದ ನೀರವತೆಗೆ ಮತ್ತೆ ಮಾತಿನ ತೇರು
ಭವಿಷ್ಯದ ಹೆಜ್ಜೆಗಳು ಕಾಲಾತೀತ ನಮ್ಮೊಳಗೆ
ಬೇರಿಲ್ಲದ ಗಿಡದ ಒಂಟಿ ಜೀವ ಮಾಯೆ!
ಒಂದೊಂಮ್ಮೆ ಪಾದದಡಿ ಚಲಿತ ನೀರು
ಮತ್ತೆ ಕಾಣದು
ಕಾಲವೆ ನಿರ್ಣಯಿಸು ನನ್ನ ಹಕ್ಕು ನಿನ್ನದಾಗಲಿ
ಹೊಸ ಚಿಗುರು ಧಾವಂತಕ್ಕೆ ಸಿಲುಕಿ
ನಲುಗುವ ಮೊದಲು
ಋತು, ಪಕ್ಷ, ತಿಥಿಗಳ ಮತ್ತದೆ ಗಣನೆಗೆ
ಕಾಡು ಮಲ್ಲಿಗೆಯ ಜಾಡು ಹಿಡಿದು ಹೊರಡು
ನೆಲ ಮುಗಿಲ ಗಾದಿಯ ಹುಂಬತನ
ಇಲ್ಲ ಸಲ್ಲದ ಹಾದಿಯಲ್ಲಿ
ಹೂವು ಮುಳ್ಳಿನ ರಹದಾರಿ
ನಿನ್ನೆಗಳಿಲ್ಲದ ಹಬ್ಬ: ನಾದವಿಲ್ಲದ ಹಾಡು
ಪಾಡಾಗುವ ಮುನ್ನ
ವರ್ತಮನ ಮೀರಿ ನಿಲ್ಲು
ಭವಿಷ್ಯ ಕುಂಚದಲ್ಲಿದ್ದ ತೆಗೆದ ಗರ್ಭ
ಬಣ್ಣ ತುಂಬಿದೆ ಪ್ರಾಂಜಲ ಕನಸ ತೋರಣ
ಗಡಿಯಾರದ ಮುಳ್ಳಿನ ತಿರುವು
ನಾಳೆಗಳ ಹೊಸ್ತಿಲಲ್ಲಿ ಹೂಬಿಸಿಲು
ಬಾಗಿದೆ ಕೊರಳೊಡ್ಡಿ ನಿದ್ದೆ ಬಾರದ ಸದ್ದಿಗೆ
ಹೊಸ ಶಕೆ ಎನಿತು ದೂರ
ಯುಗಯುಗದ ರಾಡಿ ತೊಳೆಯಲು
ಸಮಯ ಮೀರಿದ ಬದುಕಿಗಂಜಿ
ಮನುಕುಲದ ಮನ್ವಂತರ ಹುತ್ತದೊಳಗಡಗಿದೆ
ಅನಿವಾರ್ಯದ ಆಲಾಪನೆ ಬಯಸಿ
ಕಾಲದೊಂದಿಗೆ ನಾವು
ಮರುಹುಟ್ಟು ಪಡೆಯೋಣ….
– ಸಂಗೀತ ರವಿರಾಜ್, ಕೊಡಗು
ಕವನ ಚೆನ್ನಾಗಿದೆ 🙂
nice sangeeta. Your poems invariably have complexity in thought and texture. Most importantly I like your positive optimism in your writings
‘ಬಣ್ಣ ತುಂಬಿದೆ ಪ್ರಾಂಜಲ ಕನಸ ತೋರಣ’ ಸಾಲು ತುಂಬಾ ಇಷ್ಟವಾಯಿತು 🙂
ಸಮಯ ಮೀರಿದ ಬದುಕಿಗಂಜಿ
ಮನುಕುಲದ ಮನ್ವಂತರ ಹುತ್ತದೊಳಗಡಗಿದೆ
ಅನಿವಾರ್ಯದ ಆಲಾಪನೆ ಬಯಸಿ
ಕಾಲದೊಂದಿಗೆ ನಾವು
ಮರುಹುಟ್ಟು ಪಡೆಯೋಣ….
ಮನಮುಟ್ಟುವ ಬರಹ…
ಥ್ಯಾಂಕ್ಸ್ ಟು ಆಲ್
sangeetha