ಕವನ ಸೃಷ್ಟಿ

Share Button

ಮೊದಲು ವಿಷಯವ ಗ್ರಹಿಸಿ ಲಯ ನಡೆಯನರಸಿ
ಹದವಾಗಿ ಮತ್ತದಕೆ ಪದ ಶಯ್ಯೆಯಿರಿಸು
ಒದಗಿಸುತ ಭಾಷೆಯನು ಸರಳ ಶೈಲಿಯಲಿ
ಮಿದುಗೊಳಿಸಿ ಕೃತಿ ರಚಿಸು ಸ್ವಾoತ ಹರುಷದಲಿ

ರವಿಕಾಣದುದ ಕಾಂಬ ಕವಿಯ ಭಾವವನು
ಸುವಿವೇಕವುಳ್ಳವರು ದರ್ಶಿಸುವರಿದನು
ವಿವಿಧ ಜನ ದೃಷ್ಟಿಯೊಳು ಭೇದವಿರಬಹುದು
ಅವಮಾನಪಡದೆ ಬರೆ ಲೇಖನಿಯ ಹಿಡಿದು

ಕೃತಿಯ ವಿರಚಿಸುವಾಗ ಮೈಮರೆಯಬೇಡ
ಜತನದಿ೦ದೆಚ್ಚರಿತು ಮತ್ತೊಮ್ಮೆ ನೋಡ
ಹಿತಕರದ ಶಬ್ದಗಳು ತಾವಾಗಿ ಬರಲು
ರತುನ ದೊರೆoತಂತಹುದು ನಡೆವ ದಾರಿಯೊಳು

ವಿಧವಿಧದಿ ಶೋಭಿಸುವ ದೇಹ ಸಿಂಗರದಿ
ಮದುವೆ ಮಂಟಪ ಹೊಗುವ ಮದುಮಗಳ ತೆರದಿ
ಸದಭಿರುಚಿ ಮೂಡಿಸುವ ಕಾವ್ಯಕನ್ಯೆಯನು
ಮುದದಿಂದ ಜನಪದದ ಮುಂದಿರಿಸು ನೀನು

ಕವಿತೆಯೊಂದರ ಸಾಲನೋದಿದಾಕ್ಷಣದಿ
ಲವಲವಿಕೆತರಬೇಕು ವಾಚಕನ ಮನದಿ
ಅವಿರಳದ ಗೇಯ ರಚನೆಗಳ ಲಾಲಿತ್ಯ
ಶ್ರವಣ ಸುಖಕರವಹುದು ನಿತ್ಯವಿದು ಸತ್ಯ!!!

-ಕಣಿಪುರೇಶ ಪ್ರಿಯ

    

7 Responses

  1. ವಿದ್ಯಾ ಶ್ರೀ ಎಸ್ ಅಡೂರ್ says:

    ನಾಲ್ಕನೇ ಪ್ಯಾರಾ ಸೂಪರ್ ಸರ್….ಒಬ್ಬ ಕವಿ ಏನೇನೆಲ್ಲ ಗಮನಿಸಬೇಕು ಎಂಬುದನ್ನ ಚೆನ್ನಾಗಿ ವಿವರಿಸಿದ್ದೀರಿ.

  2. ವಿದ್ಯಾ ಶ್ರೀ ಎಸ್ ಅಡೂರ್ says:

    ನಿಮ್ಮನ್ನು ಇಲ್ಲಿ ಕಂಡು ಖುಷಿಯಾಯಿತು. ಪರಿಣಿತ ರವಿ ಯವರ ಮೂಲಕ ನಿಮ್ಮ ಕಾವ್ಯನಾಮ ಕೇಳಿ ಬಲ್ಲೆ..

    • ಕಣಿಪುರೇಶ ಪ್ರಿಯ. says:

      ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಿಮಗೆ…..

  3. ಮಹಾಬಲ says:

    ಅರ್ಥಪೂರ್ಣ ಕವನ.

  4. ಶಂಕರಿ ಶರ್ಮ says:

    ಭಾವಪೂರ್ಣ, ಅರ್ಥಪೂರ್ಣ ಸೊಗಸಾದ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: