‘ದ್ವಂದ್ವ’
ಇತ್ತೀಚೆಗೆ ನನ್ನೂರಲ್ಲಿ ನವಿಲುಗಳು
ಹೆಚ್ಚಾಗಿರುವ ಸುದ್ದಿಗೆ
ಸಂಭ್ರಮಿಸುವುದೋ ವಿಷಾದಿಸುವುದೋ
ತಿಳಿಯಲಾಗುತ್ತಿಲ್ಲ ಬುದ್ಧಿಗೆ.
ನವಿಲುಗಳು ಸರಿ, ನವಿಲಿನಾಹಾರ
ಹಾವು- ಹುಳು- ಉಪ್ಪಟೆಗಳೂ
ಹೆಚ್ಚಾದುವೇ ಹೇಗೆ..?
ಈಗ ಹೇಳಿ, ಚೆಂದ ಕುಣಿತ,
ಕಣ್ಮನ ತಣಿತಕೆ ನವಿಲುಗಳಿರಲಿ
ಎನ್ನುವುದೇ ಹೇಗೆ..!
ಇದಾಗದೇ ಕಂಡೂ ಕಂಡೂ ವಿಷ
ಕುಕ್ಕುವ ಹಾವಿಗೇ ಕೊಡಪಾನ
ಹಾಲೆರದ ಹಾಗೆ..!
–ವಸುಂಧರಾ ಕದಲೂರು.
ಕವನ ಚೆನ್ನಾಗಿದೆ. ನಿಮ್ಮೂರಿನ ವಿಷಯ ಇದೆ.ಧನ್ಯವಾದಗಳು
ಪ್ರಕೃತಿಯ ಮಡಿಲೇ ಸುಂದರ, ಇಲ್ಲಿ ಎಲ್ಲವೂ ಒಂದರ ಮೇಲೊಂದು ಅವಲಂಬಿತ, ಪ್ರಕೃತಿಯೇ ಇಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾಳೆ, ಹಾಗಾಗದೆ ಇದ್ದಾಗ ಮಾತ್ರ ಅವಘಡಗಳು ಸಂಭವಿಸುತ್ತವೆ. Nice madam ji.
ಧ್ವನಿಪೂರ್ಣ ಕವಿತೆ
ಪ್ರಕೃತಿ ಸಮತೋಲನ ಬಗ್ಗೆ ಭಾವಪೂರ್ಣ ಕವನ