ಗಜಲ್ : ದ್ವಂದ್ವ
ಎಲ್ಲರೂ ದುಷ್ಟರೆಂದೆಣಿಸದಿರು ಲೋಕದಲಿ ಒಣ ಮರದ ಸನಿಹವೇ ಹಸಿರು ಇರುವಂತೆ
ಬದುಕನ್ನು ಯಂತ್ರಿಸುವ ಭಂಡತನವೇಕೆ ಇರುವೆಗೂ ಕಬ್ಬಿಣ ಹೊರುವ ಪೊಗರು ಇರುವಂತೆ
.
ಒಲವು ಅಳಿಯದು ಸ್ಚಚ್ಛ ಎದೆಯಾಳ ಒರತೆಯಲಿ ಕೂರಂಬು ಇರಿದರೂ ಅಂತರ್ಯದಿ
ಛಲವೇಕೆ ಹುಟ್ಟನಡಗಿಸುವ ಯತ್ನದಲಿ ಚಕ್ರವರ್ತಿಗೆ ಹಗಲು ಕನಸಿನೊಸರು ಇರುವಂತೆ
ಹುಳಿಯ ಹುಂಡದು ಸಾಕು ಕೆಡಿಸುವೆಡೆ ಕ್ಷೀರವನು ಜಡವ ಕೊಡುವೆಡೆ ಉದರದೊಳಗೆ ತಾನು
ಸುಖ ಸಾಗರದ ಅಲೆಗಳೊಡನಾಡಿ ನಲಿಯುತ್ತ ದಡಕೆ ಅಪ್ಪಳಿಸದೆಯೆ ಉಸಿರು ಇರುವಂತೆ
ನಯನಗೋಚರವಿರದ ಕೀಟಾಣು ಬಂದಾಗ ಜಟ್ಟಿಯೂ ಗಟ್ಟಿಯೆಂದೆನಿಸಲಾರ ತಾನೆ
ಕಾಲ ಬರದಿರಲು ಮತಿಯಿರಲಿ ಜೋಪಾನ ಕೆಟ್ಟು ಹೋಗಲು ಜಗದಿ ಕೆಸರು ಇರುವಂತೆ
ಕೊರೋನ ಬಂದಿಹ ಹಾಗೆ ಚುಚ್ಚುತಲಿ ತನುವನ್ನು ಕ್ಷಯಿಸುವಾಸೆಯ ನೀಗು ಬೇಗ ಈಶಾ
ಕರುಣೆ ಕಲ್ಮಶ ರಹಿತವಾದಾಗ ಮಧು ಮಧುರ ಆಹ್ಲಾದಕರ ಸುಖದ ಮೊಹರು ಇರುವಂತೆ
-ಡಾ ಸುರೇಶ ನೆಗಳಗುಳಿ
ಸಲಹೆಮ್ಮ ಈಶಾ….ನಿಜ .
ಜಗವ ಹೊಕ್ಕ ಮಾರಿಯ ಓಡಿಸಲು ಜಗದೀಶನ ಮೊರೆ ಹೋಗಬೇಕಾಗಿದೆ…ಗಝಲ್ ಚೆನ್ನಾಗಿದೆ.