ಚಪ್ಪಾಳೆ
ಕರುಣೆಯ ನಾಡಿನ ಸಮಸ್ತ ಜನತೆಯ
ಹೃದಯಾಳದಿಂದ ಚಪ್ಪಾಳೆ ಚಪ್ಪಾಳೆ
ಪ್ರಾಣದ ಹಂಗು ತೊರೆದು ನಮ್ಮಯ
ಪ್ರಾಣದ ರಕ್ಷಣೆಗೆ ನಿಂತವರಿಗೆ ಚಪ್ಪಾಳೆ.
ಕೊರೋನದ ವಿರುದ್ಧ ಹೋರಾಡುತ್ತಿರುವ
ವೈದ್ಯರು, ಶುಶ್ರೂಷಕರಿಗೆ ಚಪ್ಪಾಳೆ
ಜನರಲ್ಲಿ ಜಾಗೃತಿಯ ಮೂಡಿಸುತ್ತಿರುವ
ಸಮೂಹ ಮಾಧ್ಯಮ ಮಿತ್ರರಿಗೆ ಚಪ್ಪಾಳೆ.
ನಮ್ಮಯ ಊರನ್ನು ಸ್ವಚ್ಛಗೊಳಿಸುತ್ತಿರುವ
ಪೌರ ಕಾರ್ಮಿಕರಿಗೆ ಹೃನ್ಮನದ ಚಪ್ಪಾಳೆ
ವೈದ್ಯಕೀಯ ತುರ್ತು ಸೇವೆಗಳ ನೀಡುತ್ತಿರುವ
ಆಂಬುಲೆನ್ಸ್ ಸಿಬ್ಬಂದಿಗಳಿಗೆ ಚಪ್ಪಾಳೆ.
ಗಡಿಯಲ್ಲಿ ನಿಂತು ದೇಶವ ಕಾಯುತ್ತಿರುವ
ವೀರ ಯೋಧರಿಗೆ ಜೈ ಹಿಂದ್ ಚಪ್ಪಾಳೆ
ನಾಡಿನಲ್ಲಿ ಜನರ ರಕ್ಷಣೆ ಮಾಡುತ್ತಿರುವ
ಆರಕ್ಷಕ ಸಿಬ್ಬಂದಿ ವರ್ಗದವರಿಗೆ ಚಪ್ಪಾಳೆ.
ಅಗತ್ಯ ಔಷಧಿ ಮಾತ್ರೆಗಳ ಒದಗಿಸುತ್ತಿರುವ
ಔಷಧಿ ಅಂಗಡಿ ಸಿಬಂದಿಗೆ ಚಪ್ಪಾಳೆ
ದಿನನಿತ್ಯದ ಸುದ್ಧಿಯ ತಲುಪಿಸುತ್ತಿರುವ
ದಿನ ಪತ್ರಿಕೆಯ ಮಿತ್ರರಿಗೆ ಚಪ್ಪಾಳೆ.
ರಸ್ತೆಯಲ್ಲಿ ನಿಂತು ಜಾಗೃತಿ ಮೂಡಿಸಿದ
ಸಂಚಾರಿ ಪೊಲೀಸ್ ಸಿಬ್ಬಂದಿಗೆ ಚಪ್ಪಾಳೆ
ಜನರ ಆರೋಗ್ಯಕ್ಕಾಗಿ ಕಂಕಣಬದ್ದರಾದ
ನಮ್ಮಯ ಜನ ನಾಯಕರಿಗೆ ಚಪ್ಪಾಳೆ.
ದಿನ ಬಳಕೆಯ ಆಹಾರ ಸಾಮಗ್ರಿಗಳ
ಒದಗಿಸಿ ಜೀವ ರಕ್ಷಿಸಿದವರಿಗೆ ಚಪ್ಪಾಳೆ
ಜನರೆಲ್ಲರು ಒಂದಾಗಿ ಜನತಾ ಕರ್ಫ್ಯೂನು
ಕೇರ್ ಫಾರ್ ಯು ಎಂದಿದ್ದಕ್ಕಾಗಿ ಚಪ್ಪಾಳೆ.
-ಶಿವಮೂರ್ತಿ.ಹೆಚ್, ದಾವಣಗೆರೆ.
ನಮ್ಮ ಕವನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು
ವಾವ್ ಸೂಪರ್
ತುಂಬು ಹೃದಯದ ಧನ್ಯವಾದಗಳು
ವಿವಿಧ ರೂಪಗಳಲ್ಲಿ ನಮ್ಮನ್ನು ರಕ್ಷಿಸುವವರಿಗೆ ಚಪ್ಪಾಳೆ ನಮನ..