ಅಕ್ಷರದ ಆ(ಈ)ಯೀ
ನೀನಿರುವೆ ಸಾವಿತ್ರಿಬಾಯಿ
ನಮ್ಮೆಲ್ಲರ ಅಕ್ಷರದ ಆಯೀ
ಅಸಮಾನತೆ ಕಂದಕದಿಂದೆದ್ದು
ಗೆದ್ದಿರುವೆ ಆಗಿ ನೀ ಸರಸೋತಿ.
ಹೆಣ್ಣೊಂದು ಕಲಿತರೆ
ಜಗವೇ ಕಲಿತಂತೆಂಬುದನು
ಅಕ್ಷರದ ಕ್ರಾಂತಿ ಕಿಡಿಗಳನ್ನಾಗಿ
ಸಿಡಿಸಿದೆ ನಮ್ಮೆಲ್ಲರ ಅಕ್ಷರದ ಆಯೀ
ಅಪಹಾಸ್ಯ ಗೈದವರಿಗೆ.
ತೋರಿದಿ ಸ್ತ್ರೀ ಶಕ್ತಿಮಹಿಮೆ
ಹಿರಿದಾಯಿತು ಶಿಕ್ಷಣದಗರಿಮೆ
ಸಹನಾಮಯಿ ನೀ ಕರುಣಾಮಯಿ
ಕಲ್ಲು ಬೀಸಿದವರಿಗೆ
ಬಳಪದ ಕಲ್ಲು ಪುಸ್ತಕ ಕೊಟ್ಟೆ
ಅಡ್ಡಗಟ್ಟಿದವರಿಗೆ ನೀ
ಅಕ್ಷರದೂಟವ ಬಡಿಸಿದೆ.
ಮನೆಯೇ ಮೊದಲ ಪಾಠಶಾಲೆ
ಜನನಿ ಮೊದಲ ಗುರುವೆಂದು
ನುಡಿತೋರಣ ಕಟ್ಟಿ ಅಕ್ಷರದ
ಕ್ರಾಂತಿಗೆ ನೀ ಮುನ್ನುಡಿಯಾದೆ.
– *ರೇಮಾಸಂ*
ಡಾ.ರೇಣುಕಾತಾಯಿ ಎಂ.ಸಂತಬಾ.
rensan2004@yahoo.com
ಚೆಂದದ ಕವನ..ಅಕ್ಷ್ರರದ ಆಯಿಗೆ ಪ್ರಣಾಮಗಳು.
ಸುಂದರವಾದ ಕವನ.
ಆ ವಿದ್ಯಾದೇವಿಗೊಂದು ನಮನ.
ಚಂದದ ಅಕ್ಷರದಸಾಲುಗಳು
ಅಪರೂಪದ ಧೀಮಂತ ಮಹಿಳೆಯ ಬಗ್ಗೆ ಅಭಿಮಾನವೆನಿಸುತ್ತದೆ. ಚಂದದ ಕವನ.