ಭಾರತೀಯ ನೃತ್ಯಕ್ಕೆ ’ವಿದೇಶಿ’ ಹೆಜ್ಜೆ
ಹಲವರು ಪಾಶ್ಚಾತ್ಯ ನೃತ್ಯಕ್ಕೆ ಮಾರುಹೋಗುವುದು ಸಾಮಾನ್ಯ. ಆದರೆ, ಪಾಶ್ಚಾತ್ಯರೇ ಭಾರತೀಯ ನೃತ್ಯಕಲಿತರೆ? ಹಾಗೆ ಕಲಿತ ನೃತ್ಯವನ್ನುಭಾರತೀಯ ಪ್ರತಿಭೆಗಳಂತೆಯೇ ಪ್ರಸ್ತುತಪಡಿಸಿದರೆ?ಇದಕ್ಕೆ ಸಂಬಂಧಿಸಿದ ಕುತೂಹಲವನ್ನುತಣಿಸುವ ಹಾಗೆಯೇಈ ಸಲದ ಲಕ್ಷದೀಪೋತ್ಸವ ಕಂಗೊಳಿಸಿತು.ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಡಿ.ಎಂ ಪೌಢ ಶಾಲಾ ಆವರಣದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮಕ್ಕೆ ಸಿದ್ಧಪಡಿಸಿರುವ ವಸ್ತುಪ್ರದರ್ಶನ ಮಂಟಪದಲ್ಲಿ ಜರ್ಮನಿಯ ಕಲಾವಿದರು ಭರತನಾಟ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳ ದೇಶೀಯ ಕಲೆಗಳನ್ನು ಪ್ರತಿನಿಧಿಸುವ ನೃತ್ಯಗಳನ್ನು ಪ್ರದರ್ಶಿಸಿ ಕಲಾ ರಸಿಕರನ್ನು ರಂಜಿಸಿದರು.
ಉಡುಪಿಯ ‘ದರ್ಪಣ’ ಸ್ಕೂಲ್ ಆಫ್ ಪರ್ಫಾ
ಉಡುಪಿಯ ‘ದರ್ಪಣ’ಸ್ಕೂಲ್ ಆಫ್ ಪರ್ಫಾರ್
ಭಾರತೀಯ ನೃತ್ಯ ಶೈಲಿಯನ್ನುಕಲಿಯುವ ಆಸಕ್ತಿಯಿಂದ ಜರ್ಮನಿಯ ನಾಲ್ವರು ಆಗಸ್ಟ್ ತಿಂಗಳಲ್ಲಿ ಉಡುಪಿಯ ’ದರ್ಪಣ ಸ್ಕೂಲ್ ಆಪ್ಪರ್ಫಾರ್ಮಿಂಗ್’ ಪ್ರವೇಶಾತಿ ಪಡೆದಿದ್ದರು.ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತೀಯ ನೃತ್ಯಕಲಿತು ಮೊದಲ ಬಾರಿಗೆ ಲಕ್ಷದೀಪೋತ್ಸವದಲ್ಲಿ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.
ವರದಿ: ಗಾಯತ್ರಿಗೌಡ
ಚಿತ್ರಗಳು: ಅಭಿರಾಮ್ ಶರ್ಮ
ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶೀಯರಿಗಿರುವ ಒಲವು ಅಪಾರ, ನಿಜ್ವಾಗ್ಲೂ ಭಾರತೀಯರೇ ಭಾರತೀಯರಾಗಿಯೂ ನಮ್ಮ ಸಂಸ್ಕೃತಿ , ಸಂಸ್ಕಾರಗಳ ಬಗ್ಗೆ ಹಲವಾರು ಬಾರಿ ಅಸಡ್ಡೆ ತೋರುತ್ತೇವೆ . ವಿದೇಶೀಯರು ಎಲ್ಲಿಂದಲೋ ಬಂದು ನಮ್ಮ ಆಚಾರ ವಿಚಾರಗಳನ್ನು ಬಹಳ ಕಡಿಮೆ ಸಮಯದಲ್ಲಿ ಅರ್ಥೈಸಿ ಅನುಸರಿಸುತ್ತಾರೆ . ಚೆನ್ನಾಗಿದೆ ಬರಹ
ವಿದೇಶೀಯರನ್ನು ಕಂಡು ಮೂಗು ಮುರಿಯುವ ಬದಲು ಅವರ ನಿಷ್ಠೆ, ಇಚ್ಛಾಶಕ್ತಿಗಳನ್ನು ಗಮನಿಸದರೆ ತಿಳಿಯುವುದು ಅವರ ಪ್ರತಿಭೆ. ಸುಂದರ ಚಿತ್ರದ ಜೊತೆಗಿನ ಬಲಹ ಚೆನ್ನಾಗಿದೆ.