ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ಮಲಗಿದಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ನೀನಿರದಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ನಿನ್ನ ಒಂದು ಕಿರುನೋಟ ನನ್ನೆದೆಯಲಿ ವಸಂತವನೆಬ್ಬಿಸಿದೆ
ಮರುಭೂಮಿಯಾಗಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ಬರಿದಾದ ಆಗಸದಲಿ ನಲ್ಲನ ಹುಡುಕುತಿಹ ಮರುಳ ಇರುಳೇ
ಚಂದಿರನಿರದಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ಕಣ್ಣರೆಪ್ಪೆಯ ಮೇಲೆ ನಿನ್ನ ನಿರೀಕ್ಷೆಯ ಭಾರ ನಿದ್ರಿಸಲಾಗುತ್ತಿಲ್ಲ , ಹೊಸ್ತಿಲ
ದೀಪ ಉರಿಯುತಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ನನಗಾಗಿ ಮರುಜನ್ಮ ಜಾಲಾಡಿಸುತಿಹ ಜನ್ಮಾಂತರದ ಜೊತೆಗಾರನೇ
ಪುರ್ನಜನ್ಮವಿಲ್ಲದಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
ಬಳಿ ನೀನಿಲ್ಲವೆಂದು ಸಮಾಧಿಯ ಗೋಡೆಗಳು ಖಾಲಿತನ ಸೂಸುತಿವೆ
ಅನಂತ ಶಯನದೊಳಿರುವಾಗಲೂ ನಾನು ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ
–ಡಾ.ಶೋಭಾ ನಾಯಕ್
ಸುಂದರ ಲಹರಿ . ಅಲೆ ಅಲೆಯಾಗಿ ಆವರಿಸೋ ತಂಗಾಳಿಯಂತಹ ಮಧುರ ಭಾವ .
ಧನ್ಯವಾದಗಳು
ಪ್ರೇಮವೆಂದರೇ ಹಾಗೆ… ಕವಿತೆ ಚೆಂದವಿದೆ
ಧನ್ಯವಾದಗಳು
Mam it’s a feel love… Nice one
Super mdm