ನೆರಳು
.
ನಮ್ಮಿಬ್ಬರ ನೆಲವೊಂದೆ
ನಮಗೆರೆವ ಜಲವೊಂದೆ
ನಾವಾಡುವ ಉಸಿರೊಂದೆ,.
ನಮ್ಮಿಬ್ಬರ ಆಟವೊಂದೆ
ನಮ್ಮಿಬ್ಬರ ನೋಟವೊಂದೆ
ಎದುರಾದ ಪರಿಸ್ಥಿತಿಯೊಂದೆ,,
.
ನಾನೂ ತಬ್ಬಲಿ, ನೀವೂ ತಬ್ಬಲಿ,
ನಾನೂ ತಬ್ಬಲಿ, ನೀವೂ ತಬ್ಬಲಿ,
ನಮಗಾರು ಆಸರೆ
ನಾ ನಿಮಗೆ, ನೀವು ನನಗೆ,
.
ಬನ್ನಿ ನೆರಳ ಹುಡುಕೋಣ
ಬನ್ನಿ ನೆರಳ ಹುಡುಕೋಣ
ಬನ್ನಿ ಗೂಡ ಕಟ್ಟೋಣ
ಪಯಣದಿ ಜೊತೆ ಸಾಗೋಣ.
ಪಯಣದಿ ಜೊತೆ ಸಾಗೋಣ.
.
-ಸುಮಿ
ಮುಗ್ಧ ಜೀವಿಗಳ ಒಡನಾಟ . beautiful
ಮುಗ್ಧ ಮನಗಳ ನವಿರಾದ ಕವಿತೆ.