ಏಕೆ ಮುನಿಸು ಮೋಡಗಳೇ
ಏಕೆ ಈ ಮುನಿಸು
ಓಡುವ ಮೋಡಗಳೇ
ನಾಲ್ಕು ಹನಿಯ ಚೆಲ್ಲುವ
ಮನಸು ನಿಮಗಿಲ್ಲವೇಕೆ
ಬಾಯಾರಿದ ಒಡಲು ಬೇಡಿದೆ
ಬರಿದಾದ ಎದೆಯ ತಣಿಸಬಾರದೆ
ಬಿರಿದ ಭೀಕರ ಬರದ ಬೇಗೆಯ
ತಡೆಯಲು ನೀ ಬರಬಾರದೆ
ಆಷಾಡವೂ ಕಳೆದುಹೋಯ್ತು
ಆದರೂ ಒಂದು ಹನಿಯ ಸುಳಿವಿಲ್ಲ
ಮೇವಿಲ್ಲದೆ ನೀರಿಲ್ಲದೆ ಬಳಲಿದ
ಜೀವಗಳಿಗಿನ್ನು ಉಳಿಗಾಲವಿಲ್ಲ
ಭಣಗುಡುತಿದೆ ಒಣನೆಲ
ಬೆಂಬಿಡದೆ ಕಾಡುತಿದೆ ಬರ
ಮರುಭೂಮಿಯಂತಾಗಿರಲು
ಮರುಜೀವ ಮರುಪೂರಣವಾಗುವುದೇ
ನಮ್ಮ ತಪ್ಪನು ಮನ್ನಿಸಿ
ನಾಲ್ಕು ಹನಿಯ ಸುರಿಸಿ
ಭರವಸೆಯ ತುಂಬಿ ಮೋಡಗಳೆ
ಕಾದ ಕೆಂಡದಂತಾಗಿದೆ ಈ ಇಳೆ
–ಅಮು ಭಾವಜೀವಿ
ತುಂಬ ಚೆನ್ನಾಗಿದೆ ಕವಿತೆ ಸರ್
ಭಾವ ಜೀವಿಯವರ ಸದಾಶಯದಂತೆ ಸರಿಯಾದ ಕಾಲಕ್ಕೆ ತಕ್ಕಷ್ಟು ಮಳೆಯಾಗಲಿ
ಚಂದದ ಕವನ. ಪ್ರಸ್ತುತ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ ಹಾಗಿದೆ. ಮಳೆಗಾಲ ಆದರೂ ಸರಿಯಾಗಿ ಮಳೆ ಆಗ್ತಿಲ್ಲ , ಕೃಷಿಕರಲ್ಲಿ ಬರಗಾಲದ ಭೀತಿ ಈಗಾಗಲೇ ಆವರಿಸತೊಡಗಿದೆ
ಸದಾಶಯದ ಸುಂದರ ಕವನ.