ಜಲ ಜೀವ
ಒಡಲು ಬಗಿ, ತೆಗಿ, ಚೆಲ್ಲು ಹರಿಯಲಿ
ಜೀವ ಜಲದ ಸುಳಿ
ಹೊಳೆ, ಬೆಳೆ,ಕೊಳಕು ಕಳೆವ
ನೆಲದ ಹದಕೂ ಬೇಕು ಮಳೆ
ಬಾವಿ,ಸಂಪು, ಕೊಳ,ತೊಟ್ಟಿ, ಎಲ್ಲ
ನೀರ ಬಳಕೆ ನೆಲೆ
ಕೈಪಂಪು,ಯಂತ್ರ,ಕೊಳಾಯಿಗಳಲಿ
ನೀರು ಹರಿವ ಸೆಳೆ
ಉಕ್ಕಿಸಿದೇವು ನೆಲ ಬಗೆದು,ಹರಿದು ಮುರಿದು
ಕೊರೆದು ಜಲದ ನರ
ಬತ್ತಿಸಿದೆವು ಮೊಗೆದು ಉಗಿದು, ಸುರಿದು
ಕೊಚ್ಚೆತುಂಬಿ ನೆಲಕೆ ಬರ
ಕಿತ್ತಿ,ಕಡಿದು, ಸುಟ್ಟು,ಕತ್ತರಿಸಿ ಹಲವು
ಭೂಮಿ ಕಾಯ್ವ ಮರ
ಒಂದೇ ಒಂದು ಬೀಜ, ಸಸಿ, ಬಳ್ಳಿ
ನೆಡದ ನಾವು ಕುರಿ ನರ
ನೆಲವೆಲ್ಲ ಕಲ್ಲು, ಬಂಡೆ,ಸಿಮೆಂಟ್ ಹಾಸು
ಸಣ್ಣ ಹನಿಯೂ ಹಿಂಗುತಿಲ್ಲ
ಆವಿಯಾಗಿ ಸುರಿದು,ಹರಿದು, ಬರಿದು
ಇಳಿಯುತಿಲ್ಲ ಒಡಲೊಳು ಕಣವಿನಿತು
ಇಂಗಿಸುವ ಪವಿತ್ರಕಾರ್ಯ ಮಾಡುತಿಹುದು
ಕೊಚ್ಚೆ ಗುಂಡಿ,ಚರಂಡಿ,ರಾಡಿ
ಸ್ವಚ್ಛ ಶುದ್ಧ ಜಲ ದಕ್ಕಿತೇಗೆ ನಮಗೆ
ತಾಜ್ಯ,ಮುಕ್ತಿ ಕಾರ್ಯ ಮಾಡಿ
ಇಂಗುಗುಂಡಿ,ಕೆರೆ ತೊರೆ, ಹಳ್ಳ ಕೊಳ್ಳ ತುಂಬಿ
ದಕ್ಕಲಿ ನೆಲದಾಳಕೆ ನೂಕಿ ನೀರು
ಬರುವ ಸಂತತಿ ಪಡೆದು,ಕುಡಿದು
ಸುಖಿಸಲಿ ಸುಖದ ಖೀರು
ಆವಿಯಾಗಿ ತೇಲಿ ನೆಲಕೆ ಬಾಗಿ ಇಳಿದು
ಸ್ಪಟಿಕ ಶುದ್ಧ ಜಲವೇ ಜೀವ
ಇನ್ನಾದರೂ ಶೇಖರಿಸಿ ಬಳಸಿ ಬೆಳಸಿ
ಜೀವ ಜಲದ ಠಾವ
–ಜ್ಯೋತಿ ಬಸವರಾಜ ದೇವಣಗಾವ
ವಾಸ್ತವಿಕತೆಯ ಚಿತ್ರಣದೊಂದಿಗೆ ಭವಿಷ್ಯದ ಕುರಿತಾಗಿ ಎಚ್ಚರಿಕೆಯ ಪಾಠ .nice
ನೀರಿನ ಅಭಾವ, ಅದರ ಉಳಿಸುವಿಕೆಗಾಗಿ ಅನನ್ಯ ಕಾಳಜಿ ವ್ಯಕ್ತ ಪಡಿಸುವ ಕವನ ಚೆನ್ನಾಗಿದೆ.