ಅಸ್ತ
ಹೊರಮನೆಯಲ್ಲಿ
ಸುಳಿದವನ ಬಿಂಬ
ಒಳಮನೆಯ ನೂರು
ಕನ್ನಡಿಗಳಲ್ಲಿ ಪ್ರತಿಫಲಿಸಿ
ಬಿಸಿಲೂ ಬೆಳದಿಂಗಳು
ಸೂರ್ಯನೂ ಸುಮುಖ
ಈಗ
ಎಲ್ಲಿ ಹೋದ
ಸುಳಿಗಣ್ಣ ಚೆನ್ನಿಗ
ನೇಸರನೂ ಅಡಗಿದನೇ
ಮಳೆ ಸುರಿಸದೇ
ಸುಮ್ಮನೇ ‘ಧಿಗಿಣ’
ಕುಣಿವ ಕರಿಮೋಡಗಳ ಹಿಂದೆ
ಬಾಡಿದ ಬಿಸಿಲು
ಖಾಲಿ ಒಡಲು
ಒಳಮನೆಯಲೀಗ
ಬರೀ
ಕವಿದ ನೆರಳು…
– ಡಾ.ಗೋವಿಂದ ಹೆಗಡೆ
ವಾಹ್..! ಚೆಂದದ ಕವಿತೆ…
Beautiful
ವಾಹ್..!
ಎಂಥ ಸುಂದರ ಕವಿತೆ!!!
ಧನ್ಯವಾದಗಳು
ಮತ್ತು
ಅಭಿನಂದನೆಗಳು
ಸು ಕವಿತೆ, ಎನ್ನ ಬಹುದೇ!
ಚಂದ
ಕರಿ ಮೋಡ ಮಳೆಯಾಗಿ ಸುರಿದು ನಿಂತ ಮೇಲೆ ಮತ್ತೆ ಬರುವನು ರವಿ ,
ಈ ಅದ್ಭುತ ಕ್ಷಣಗಳ ಪದಗಳಲ್ಲಿ ಬಣ್ಣಿಸೋ ಮನಸೇ ಬೇರಾರು ಇಹರು ನಿನಗಿಂತ ಮಿಗಿಲಾದ ಕವಿ .
ಚಂದದ ಕವನ
Nice sir
ಸುಂದರ ಕವಿತೆ