ಬೀಳುವ ಮುನ್ನ
ನೀವು ಮನುಷ್ಯರೇ,
ನಾ ಬೀಳುವ ಮುನ್ನ
ಕಡಿಯುವಿರೇಕೆ ನನ್ನನು,
ನೀವೇನು ಉತ್ತಿರೇ ಬಿತ್ತಿರೇ
ಬೆಳೆಸಿರೇ ನಮ್ಮ ಕಡಿಯಲು,,
ಕಡಿಯುವ ಮುನ್ನ ಯೋಚಿಸಿ
ನನ್ನ ನಿಮ್ಮ ಅನುಬಂಧದ ಬಗ್ಗೆ,
ನೀವು ಗರ್ಭದಿ ಕೊಲ್ಲದೆ
ಬಿಟ್ಟರೆ ನನ್ನನ್ನು,
ಹೆರುವೆನು ಸಾವಿರ ಸಾವಿರ
ನೆರಳು ನೀಡುವ ಮರಗಳನ್ನ ,
ಕೊಂದರೆ ಕಳೆದುಕೊಳ್ಳುವಿರಿ
ನಾ ಬೀಸುವ ಗಾಳಿಯನ್ನು ,,
ಕಡಿದರೆ ಕಳೆದುಕೊಳ್ಳುವಿರಿ ನಾ
ನೀಡುವ ಹಣ್ಣು ಹಂಪಲನ್ನು,
ಬದುಕಬಲ್ಲಿರೇ ನಾ
ನೀಡುವ ಗಾಳಿಯಿಲ್ಲದೆ?
ಬದುಕಬಲ್ಲಿರೇ ನಾನುಣಿಸುವ
ಹಣ್ಣಿಲ್ಲದೆ?
ನನಗೇನು ನೀರುಣಿಸುವಿರಾ?
ಲಾಲನೆ ಪಾಲನೆ ಮಾಡುವಿರಾ?
ನಿಮ್ಮ ಮನೆ,ಮಠ ಕೇಳಿದೆವೇ?
ನಿಮ್ಮ ಮನೆಗಾಧಾರವೇ ನಾನು,
ನಮಗೇನು ಆರಡಿ ಮೂರಡಿ
ಜಾಗ ಬೇಕೆ?
ಕೇಳಿದ್ದು ಎರಡಡಿ ಜಾಗ
ನಮ್ಮ ಬೇರೂರಲು,,
-ಸುಮಿ