ಹೀಗಿದ್ದರೆ ಚೆನ್ನ..

Share Button

Hemamala. B, DGM, Kluber Lubrication (I) Pvt.Ltd. Mysore

 

ಕಲಾವಿದರಿಗೆ ಚಪ್ಪಾಳೆಯೇ ಸ್ಫೂರ್ತಿಯಾದರೆ, ಹವ್ಯಾಸಿ ಬರಹಗಾರರಿಗೆ ಒಂದು ಉತ್ತಮ ಪ್ರತಿಕ್ರಿಯೆ ಸಂತೋಷ ಕೊಡುತ್ತದೆ. ಸುರಹೊನ್ನೆ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ಬರಹಗಳ ಹಾಗೂ ವಿನ್ಯಾಸದ ಬಗ್ಗೆ ಹಲವು ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಎಪ್ರಿಲ್ 15ಕ್ಕೆ ಈ ಜಾಲತಾಣ ಆರಂಭವಾಗಿ 3 ತಿಂಗಳು ಕಳೆಯಿತು. ಈ ಅವಧಿಯಲ್ಲಿ, ನಮ್ಮ ಬರಹಗಾರರ ಬಳಗ 32 ಆಗಿದೆ! ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ನಿವೃತ್ತ ಅಧಿಕಾರಿಗಳು ಸುರಗಿ ಬಳಗದಲ್ಲಿದ್ದಾರೆ. ಈ ಸಂಪಾದಕೀಯ ಬರಹವು 150 ನೆಯ ಪ್ರಕಟಿತ ಬರಹವೆಂದು ಹೇಳಲು ಸಡಗರವಾಗುತ್ತಿದೆ.

ವೃತ್ತಿಯ ಜತೆಗೆ ಪ್ರವೃತ್ತಿಯಾಗಿ, ಆರಂಭವಾದ ಈ ಜಾಲತಾಣವು ಇತಿಮಿತಿಗಳನ್ನು ಹೊಂದಿದ್ದರೂ ಶೀಘ್ರವಾಗಿ ಬೆಳೆಯುತ್ತಿದೆ, ಅಕ್ಷರ ಪ್ರೇಮಿಗಳನ್ನು ತಲಪುತ್ತಿದೆ ಎಂಬುದು ಸಂತಸದ ವಿಚಾರ. ಜಾಲತಾಣಕ್ಕೆ ಸರಾಸರಿ ದಿನಕ್ಕೆ 120 ಕ್ಲಿಕ್ ಬೀಳುತ್ತಿರುವುದು ಮತ್ತು ಪ್ರತಿದಿನವೂ ಕನಿಷ್ಟ 4 ಮಂದಿಯಾದರೂ ಹೊಸ ‘ಕಂಪ್ಯೂಟರ್ ಓದುಗರ’ ಸೇರ್ಪಡೆಯಾಗುವುದು ಇದಕ್ಕೆ ನಿದರ್ಶನ.  ಈ ಜಾಲತಾಣವು ಬೆಳೆಯಲು ಕಾರಣರಾದ ಲೇಖಕ, ಲೇಖಕಿಯರು ಹಾಗೂ ಸಹೃದಯ ಓದುಗರಿಗೆ ಅನಂತ ನಮನಗಳು.

ಉದಯೋನ್ಮುಖ ಬರಹಗಾತಿಯಾದ ಕುಮಾರಿ ಶ್ರುತಿ ಶರ್ಮಾ ರವರ ‘ಬೆಳದಿಂಗಳು, ಸಂಗೀತ ಮತ್ತು ಹಿಂದೋಳ’ ಲೇಖನಕ್ಕೆ ಹಲವು ಉತ್ತಮ ಅಭಿನಂದನೆಗಳು ಬಂದಿವೆ. ಜತೆಗೆ ಇನ್ನು ಕೆಲವರು, ‘ತಮಗೆ ಸಂಗೀತದ ಬಗ್ಗೆ ತುಂಬಾ ಆಸಕ್ತಿ, ಆದರೆ ಕನ್ನಡ ಬರಹವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದರಿಂದ ಇಂಗ್ಲಿಷ್ ನಲ್ಲಿ ಅನುವಾದಿಸಿ ಪ್ರಕಟಿಸಬೇಕೆಂದು‘ ವಿನಂತಿಸಿಕೊಂಡಿದ್ದಾರೆ. ಎಷ್ಟು ನೈಜವಾದ, ಸ್ಪೂರ್ತಿದಾಯಕ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆ ಅಲ್ಲವೇ?

ನನ್ನ ಅಭಿಪ್ರಾಯದಲ್ಲಿ ಸೂಕ್ತವಾದ ಪ್ರತಿಕ್ರಿಯೆ ನೀಡುವುದೂ ಒಂದು ಕಲೆ. ಮ್ಯಾನೇಜ್ ಮೆಂಟ್ ನ ಪರಿಭಾಷೆಯಲ್ಲಿ ಹೇಳುವುದಾದರೆ ಇದೊಂದು ಅತ್ಯುತ್ತಮ Sense of reciprocation with positive motivation or a Non-financial incentive. 

ಕೆಲವು ಕಮೆಂಟ್ಸ್ ಗಳು ಅಸಂಬದ್ಧವಾಗಿರುತ್ತವೆ, ನಮಗೆ ಓದಲು ಸಾಧ್ಯವಿಲ್ಲದ ಯಾವುದೋ ಲಿಪಿಯಲ್ಲಿರುತ್ತವೆ ಹಾಗೂ .ಅಸ್ತಿತ್ವದಲ್ಲಿ ಇಲ್ಲದ ಇಮೈಲ್ ನಿಂದ ಬಂದಿರುತ್ತವೆ. ಇವು ಓತಪ್ರೋತವಾಗಿ ಪ್ರಶಂಸೆಯನ್ನು ಒಳಗೊಂಡಿರುತ್ತವೆ ಹಾಗೂ ಇಂತಹ ಕಮೆಂಟ್ಸ್ ಜತೆಗೆ ಯಾವುದೋ ವೆಬ್ ಸೈಟ್ ನ ಲಿಂಕ್ ಕೊಟ್ಟಿರುತ್ತಾರೆ, ಪ್ರಚಾರವಾಗಲಿ ಎಂಬ ದೃಷ್ಟಿಯಿಂದ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಸುರಹೊನ್ನೆ ಜಾಲತಾಣದ ‘ಕತೆ-ನೀಳ್ಗತೆ’ ಎಂಬ ‘ಮೆನು ಪುಟ’ಕ್ಕೆ ವಿಪರೀತ ಪ್ರಶಂಸೆಗಳುಳ್ಳ, ವಿಭಿನ್ನ ಒಕ್ಕಣೆಗಳುಳ್ಳ 30 ಕ್ಕೂ ಹೆಚ್ಚು ಕಮೆಂಟ್ಸ್ ಬಂದಿವೆ. ಅಷ್ಟಕ್ಕೂ ಆ ಪುಟದಲ್ಲಿ ಇರುವುದು ‘ಈ ಅಂಕಣಕ್ಕೆ ಕತೆಗಳನ್ನು ಕಳುಹಿಸಬಹುದು’ ಎಂಬ ಆಹ್ವಾನ ಮಾತ್ರ! ಇಂತಹ ಕಮೆಂಟ್ಸ್ ಗಳನ್ನು ‘spam message/mail’ ಅನ್ನುತ್ತಾರೆ. ಇವುಗಳನ್ನು ನಮ್ಮ software ಗುರುತಿಸಿ ಮುಲಾಜಿಲ್ಲದೆ ಗುಡಿಸಿ ಕಸದ ಬುಟ್ಟಿಗೆ ಹಾಕುತ್ತದೆ!

 ಒಟ್ಟಿನಲ್ಲಿ, ನನ್ನ ಅಭಿಪ್ರಾಯದಲ್ಲಿ ಒಂದು ಉತ್ತಮ ಕಮೆಂಟ್ ಹೇಗಿರಬೇಕೆಂದರೆ, ಅದು ಬರಹಗಾರರಿಗೆ ಸ್ಫೂರ್ತಿ  ತುಂಬಬೇಕು ಅಥವಾ ಬರಹಕ್ಕೆ ಪೂರಕವಾಗಿರಬೇಕು. ಸರಳ ಶಬ್ದಗಳಲ್ಲಿ ಪ್ರಾಮಾಣಿಕ ಅಭಿಪ್ರಾಯವನ್ನು ಅರುಹಬೇಕು. ತೀರ ಚಿಕ್ಕದಾಗಿಯೂ ಅತಿ ದೀರ್ಘವಾಗಿಯೂ ಇರಬಾರದು.  ಕಮೆಂಟ್ ನ  ಮೂಲಕವಾಗಿ ಸಣ್ಣ ಚಿಂತನೆ, ಒಂದು ಪುಟ್ಟ ಸಂತೋಷ, ಸಣ್ಣ ಉತ್ಸಾಹ, ಸರಳ ಚೈತನ್ಯ, ಒಂದು ಸಿಹಿ ನೆನಪಿನ ಮೆಲುಕು..,,.ಇವುಗಳಲ್ಲಿ ಯಾವುದಾದರೂ ಒಂದಾದರೂ ಮೂಡಿದರೆ, ಓದುಗ-ಬರಹಗಾರರನ್ನು ಸೇರಿಸಿದ ತೃಪ್ತಿ ಸುರಹೊನ್ನೆಗೆ ಲಭ್ಯವಾಗುತ್ತದೆ.

 

 

– ಸಂಪಾದಕಿ.

 

 

6 Responses

  1. Jennifer Shawn says:

    Congratulations to Editor!
    Good to see that Suragi is growing very fast and already published 150 valued articles! ‘Suragi – as a website’ is strong technically too.. 🙂 Keep Going!

  2. Ashok Mijar says:

    ವಾರಕ್ಕೆರಡು ಬಾರಿ ಪ್ರಕಟವಾಗುವ ಲೇಖನಗಳು, ಕವನಗಳು, ಕಥೆ ಎಲ್ಲವೂ ಸ್ವಾರಸ್ಯಕರವಾಗಿರುತ್ತವೆ. ಇದು ಒಂದು ವಾರಪತ್ರಿಕೆಯಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿದೆ ಎನ್ನುವುದು ಸಂತಸದ ವಿಷಯ. ಇನ್ನೂ ಹೆಚ್ಚಿನ ಅಭಿಮಾನಿ ಓದುಗರು ಸಿಗಲಿ ಎನ್ನುವುದೇ ನನ್ನ ಆಶಯ.

    • Hema says:

      ಅಶೋಕ್ ಅವರೇ,ತುಂಬಾ ಥಾಂಕ್ಸ್.ಈ ಜಾಲತಾಣಕ್ಕೆ ನಿಮ್ಮ ಪ್ರೋತ್ಸಾಹ, ಸಹಕಾರ ಸದಾ ಹೀಗೆಯೇ ಇರಲೆಂದು ಆಶಿಸುತ್ತೇನೆ.

  3. savithrisbhat says:

    ಸುರಗಿಯ ಬಗ್ಗೆ ಹೆಮ್ಮೆಯೆನಿಸುತ್ತದೆ .ಇಷ್ಟರವರೆಗೆ ಲೇಖನ ಬರೆಯದಿದ್ದವರನ್ನೂ ಬರೆಯುವ೦ತೆ ಮಾಡಿ ಬರೆದ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ನಿಮಗೆ ನನ್ನ ವ೦ದನೆಗಳು.

    • Hema says:

      ನಮ್ಮ ಉದ್ದೇಶಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸಿಕ್ಕಿದುದರಿಂದ ಸುರಗಿ ಬೆಳೆಯುತ್ತಿದೆ. ಇದು ಅಕ್ಷರ ಪ್ರೇಮಿಗಳಿಗಾಗಿ ಮೀಸಲಾದ ತಾಣ. ಹಾಗಾಗಿ ಇದುವರೆಗೆ ಯಾವುದೇ ಬರಹ ಬರೆಯದಿದ್ದವರು ಕೂಡ ಈಗ ಬರೆಯಲಾರಂಭಿಸಿದರೆ, ಅದು ನಮಗೆ ಸಂತಸ ಕೊಡುವ ಸಮಾಚಾರ. ಆ ಸಡಗರದಲ್ಲಿ ನಾವೂ ಪಾಲ್ಗೊಳ್ಳುತ್ತೇವೆ! ಬರಹದ ಹವ್ಯಾಸ ಮುಂದುವರಿಸಿ. ಧನ್ಯವಾದಗಳು.

  4. Vighneshwara says:

    ಬರಹಗಳನ್ನು ಓದುವವರು ವಿಷಯದಲ್ಲಿನ ಸತ್ವವನ್ನು ಅರಿತು ಬರೆದಿರುವವರಿಗೆ ಮನದಲ್ಲಾದರೂ ಕೃತಜ್ಞತೆಯನ್ನು ತಿಳಿಸುವುದು ಉತ್ತಮರ ಲಕ್ಷಣ. ಪ್ರತಿಕ್ರಿಯೆ ಹೇಗಿರಬೇಕೆಂದು ತಿಳಿಸಿಕೊಟ್ಟಿರುವುದು ಓದುಗರಿಗೆ ಉತ್ತಮ ಮಾರ್ಗದರ್ಶನ ತೋರುವಂತಿದೆ. ತಾಣವು ಸ್ಪೂರ್ತಿಯಾಗುವಲ್ಲಿ ಸಂದೇಹವಿಲ್ಲ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: