ಕಾಶ್ಮೀರ ಕಣಿವೆಯಲಿ…
ಭೂಸ್ವರ್ಗ ಕಾಶ್ಮೀರ ಭಾರತಮಾತೆಯ ಶಿರವು
ನಿಸರ್ಗ ಚೆಲುವಿನ ಸೊಗಸು ವರ್ಣಿಸಲಸದಳವು
ಕಾಶ್ಮೀರಿಗಳದು ಸಹಜ ಮುಗ್ದ ಸುಂದರ ನಗುವು
ಕಷ್ಟ ಸಹಿಷ್ಣುತೆಯ ಭಾವದಲಿ ಅರಳಿ ಮೊಗವು
ಸ್ವಾತಂತ್ರ್ಯ ಪಡೆಯುತಲೆ ವಿಭಜನೆಯು ಆಗುತಲಿ
ನೆರೆ ರಾಷ್ಟ್ರ ಪಾಕ್ ಆಗಿ ತಾನೆ ಬೀಗತಲಿ
ಸುಂದರ ಕಾಶ್ಮೀರದಲಿ ಆಳ್ವಿಕೆಯ ಆಸೆಯಲಿ
ಸಮರವನು ಸಾರುತಿದೆ ಕಾಲಕಾಲದಲಿ
ಭಯೋತ್ಪಾದಕರ ತಂಡ ಎಲ್ಲೆಲ್ಲು ಹರಡಿರಲು
ಮುಗ್ಧ ಮನಗಳಲಿ ಸದಾ ಭಯ ತುಂಬಿ ಹರಿದಿರಲು
ಶಾಂತಿ ನೆಮ್ಮದಿಯ ನೆಲೆ ಭಯದ ಬೀಡಾಗಿರಲು
ರಕ್ತದೋಕುಳಿಯಾಟ ರಾಕ್ಷಸರು ಆಡಿರಲು
ವೀರಯೋಧರ ದಿಟ್ಟ ಸಾಹಸದ ಕಾರ್ಯದಲಿ
ನೀಚ ಹಂತಕರ ದಿನವೂ ಹತ್ತಿಕ್ಕಿ ಸಾಗುತಲಿ
ವೀರ ಮರಣದ ಸುದ್ದಿ ಸಿಡಿಲಿನಂತೆರಗುತಲಿ
ಮಾತೆ ಸತಿಯರ ಕಂಬನಿ ತುಂಬಿ ಹರಿಯುತಲಿ
ಅಶ್ರುತರ್ಪಣವಿದೋ ಆ ಧೀರ ಕುವರರಿಗೆ
ಮಾತೆ ಭಾರತಿಯ ಆ ಮುದ್ದು ಕಂದಮ್ಮಗಳಿಗೆ
ಕೆಚ್ಚೆದೆಯ ಕಿಚ್ಚನ್ನು ಸದಾ ಬೆಳಗಿದವರಿಗೆ
ಹೆಜ್ಜೆ ಹೆಜ್ಜೆಗು ದೇಶಭಕ್ತಿ ಮೆರೆದವರಿಗೆ
– ಶಂಕರಿ ಶರ್ಮ, ಪುತ್ತೂರು.
ನರರಾಕ್ಷಸರ ಹುಟ್ಟಡಗಿಸಬೇಕೆಂಬ ಕಿಚ್ಚು ಮನದ ತುಂಬಾ
Jai Hind