ಶಾರದಾಂಬೆಗಿದೊ ಅಕ್ಷರಮಾಲೆ
ಅಕ್ಷರಾಧಿದೇವತೆ ತಾಯೆ
ಆರಾಧಿಸುವೆವು ನೀ ಕಾಯೆ
ಇನಿತು ದಯೆಯನು ತೋರುತಲಿ
ಈ ಮಕ್ಕಳನು ನೀ ಪೊರೆಯೆ
ಉತ್ತಮ ವಿದ್ಯೆಯ ಕರುಣಿಸಿ ಸಲಹು
ಊರ್ಜಿತವಾಗಲಿ ಸಂಪತ್ತು
ಋಷಿ ಮುನಿಗಳ ಈ ಪುಣ್ಯದ ಬೀಡು
ಎದುರಿಸದಿರಲಿ ಆಪತ್ತು
ಏಳಿಗೆ ಹೊಂದಲಿ ಸುವಿಚಾರಗಳು
ಐಸಿರಿ ಎಲ್ಲೆಡೆ ತುಳುಕುತಲಿ
ಒಗ್ಗಟ್ಟಿನಿಂದಲಿ ಮುಂದೆ ನಡೆಯುವ
ಓಜಸ್ಸ ನೀಡು, ಮನ ನಗಲಿ
ಔದಾರ್ಯದ ಹೃದಯವು ಎಂದೂ
ಅಂದವ ಹರಡಲಿ ಜಗ ತುಂಬಾ
ಶಾರದಾಂಬೆ ನೀ ಸಕಲರ ಪೊರೆದು
ಕೈಹಿಡಿಯೆಮ್ಮನು ಜಗದಂಬಾ
..
-ಶಂಕರಿ ಶರ್ಮ, ಪುತ್ತೂರು.
ಚೆಂದದ ಕವನ .
ಓದಿದವರಿಗೆ …ಮೆಚ್ಚಿದವರಿಗೆ ..ಧನ್ಯವಾದಗಳು