ಬದುಕಿಗೊಂದು ಪಾಠ
ಅದೊಂದು ಪಂಚತಾರಾ ಹೋಟೆಲ್. ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದ ಹೋಟೆಲ್ನಲ್ಲಿ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುವ ಸದಾ ಹಸನ್ಮುಖಿ ಸಿಬ್ಬಂದಿಯವರು. ತಮಗಿಷ್ಟವಾದ ತರಹೇವಾರಿ ತಿನಿಸುಗಳನ್ನು ಆರ್ಡರ್ ಮಾಡಲು ಮೇನು ಹಿಡಿದು ಕುಳಿತ ಹಲವರು.ಪ್ರೇಯಸಿ ಪ್ರಿಯಕರ ಹೀಗೆ ತಮ್ಮವರ ಜೊತೆ ಹರಟೆ ಹೊಡಿಯುತ್ತ ಕುಳಿತ ಕೆಲವರು. ಇಷ್ಟೆಲ್ಲಾ ಗದ್ದಲಗಳ ಗೋಜಿಗೆ ಹೋಗದೆ ಕೋಣೆಯ ಕೊನೆಯ ಟೇಬಲ್ಲಿನಲ್ಲಿ ಕುಳಿತ ದಂಪತಿಗಳು ತಮ್ಮ ಮಕ್ಕಳೊಂದಿಗೆ ವರ್ತಿಸುತ್ತಿದ್ದ ರೀತಿ ಆ ಟೇಬಲ್ಲಿನ ಸರ್ವರ್ ರಾಮಣ್ಣನ ಗಮನ ಅವರೆಡೆಗೆ ಸೆಳೆಯುವಂತೆ ಮಾಡಿತ್ತು. ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕುಳಿತಿದ್ದ ದಂಪತಿಗಳನ್ನು ನೋಡಿದರೆ ದೊಡ್ಡ ಶ್ರೀಮಂತರಂತೆ ಕಾಣುತ್ತಿದ್ದರು.
ರಾಮಣ್ಣನನ್ನು ಆ ದಂಪತಿಯ ಮಕ್ಕಳ ತುಂಟಾಟ ಬಹಳ ಆಕರ್ಷಿಸಿತ್ತು ಮಕ್ಕಳ ತುಂಟಾಟವನ್ನು ಕಣ್ತುಂಬಿಕೊಳ್ಳುತ್ತ ಅವರು ಆರ್ಡರ್ ಮಾಡಿದ ಐಟಮ್ಗಳನ್ನು ತಂದು ಅವರ ಮುಂದಿಟ್ಟ ತಕ್ಷಣ ಅವರಲ್ಲಿ ತುಂಟನಿಂದ ಒಬ್ಬ ಹುಡುಗ ಬಿಸಿ ಸೂಪಿಗೆ ಬಾಯಿ ಹಾಕಿ ಸುಟ್ಟಿಕೊಂಡುಬಿಟ್ಟ ಇದನ್ನು ಗಮನಿಸಿದ ತಾಯಿ- ‘ಬೇಬಿ. ಯು ಡೊಂಟ್ ಹ್ಯಾವ್ ಟೇಬಲ್ ಮ್ಯಾನರ್ಸ್, ಎಷ್ಟು ಸರಿ ಹೇಳಿದಿನಿ ಊಟ ಮಾಡುವಾಗ ಹೇಗಿರ್ಬೇಕು ಅಂತ, ನಾನ್ಸೇನ್ಸ್..’ ಎಂದು ಸಿಟ್ಟಿನಿಂದ ಆ ಪುಟ್ಟ ಮಗುವನ್ನು ಬೈದಿದ್ದು ನೋಡಿ ರಾಮಣ್ಣನಿಗೆ ಅಯ್ಯೋ ಏನಿಸಿತು ಆದರು ಸುಮ್ಮನೆ ದೂರ ಸರಿದು ನಿಂತನು.
ಊಟ ಮಾಡುತ್ತಿರುವಾಗ ಮಕ್ಕಳು ಏನೇ ಮಾಡಿದರೂ ಅದರಲ್ಲಿ ಒಂದು ಕೊಂಕು ಹುಡುಕಿ ಅವರಿಗೆ ಬೈಯುತ್ತಲೆ ಇದ್ದಳು.ಹಾಗೇ ಊಟ ಮಾಡುತ್ತಿರುವಾಗ ಪ್ರತಿಯೊಂದಕ್ಕು ಮಕ್ಕಳನ್ನು ದೂಷಿಸುತ್ತಿದ್ದ ಆ ಮಹಾ ತಾಯಿಯನ್ನು ನೋಡಿ ಏನು ಎನ್ನಲಾಗದೆ ಅಸಹಾಯಕನಂತೆ ರಾಮಣ್ಣ ನಿಂತಿದ್ದ.
ಕಡೆಯದಾಗಿ ಮಕ್ಕಳು ಐಸ್ ಕ್ರಿಮ್ ಆರ್ಡರ್ ಮಾಡಿದರೂ ಅದನ್ನು ರಾಮಣ್ಣ ಬಹಳ ಪ್ರೀತಿಯಿಂದ ತಂದು ಅವರ ಮುಂದಿಟ್ಟ ಐಸ್ ಕ್ರಿಮ್ ಬಂದದ್ದು ನೋಡಿ ನನಗೆ ದೊಡ್ಡದಿರಲಿ ಬೇಡ ನನಗೆ ದೊಡ್ಡದಿರಲಿ ಎಂದು ಇಬ್ಬರು ಜಗಳವಾಡುತ್ತಿರುವಾಗ ಕೈಜಾರಿ ಐಸ್ ಕ್ರಿಮ್ ನೆಲಕ್ಕೆ ಬಿದ್ದಿತು ಅದನ್ನ ನೋಡಿ ಕೆಂಡಾಮಂಡಲಳಾದ ಅವರ ತಾಯಿ ಒಬ್ಬನ ಕಪಾಳಕ್ಕೆ ಬಾರಿಸಿದಳು. ಇದನ್ನು ನೋಡಿದ ಗಂಡ “ಸಣ್ಣ ಮಕ್ಕಳು ಇರಲಿ ಬಿಡು ಪಾಪ ಅವರಿಗೆ ಯಾಕ್ ಹೋಡಿತಿಯಾ.? ಎಂದು ಹೇಳುವಷ್ಟರಲ್ಲಿ. “ಹೌದು ರೀ.ಇವರು ನಿಮ್ಮ ಮಕ್ಕಳಲ್ವಾ ಅವರು ನಿಮ್ಮ ಹಂಗೆ ಇದಾವೆ ಕಾಮನ್ ಸೆನ್ಸ್ ಇಲ್ಲಾ.” ಎಂದು ಅವಳು ಮಗುವಿನ ಕಡೆಗೆ ಸಿಟ್ಟಿನಿಂದ ನೋಡ ತೊಡಗಿದಳು.
ಏಟು ತಿಂದಿದ್ದ ಮಗುವು ಅಳಲಾರಂಭಿಸಿತು. ಇದನ್ನು ಗಮನಿಸುತ್ತಿದ್ದ ರಾಮಣ್ಣ ತಡೆಯಲಾಗದೆ ಅವರ ಬಳಿ ಬಂದು ನಿಂತು “ಪಾಪ. ಬಿಡಿ ಅಮ್ಮ ಇನ್ನೂ ಚಿಕ್ಕವನು” ಎಂಬ ಮಾತು ಪೂರ್ತಿಯಾಗಿ ಹೇಳುವುದರೊಳಗೆ “ಅಲ್ಲಯ್ಯಾ. ಇಲ್ಲಿ ನಿನ್ನ ಕೆಲಸ ಸರ್ವ್ ಮಾಡೊದಾ ಇಲ್ಲಾ ನಮಗೆ ಬುದ್ದಿ ಹೇಳೊದಾ.? ಇಂತಹ ಮಕ್ಕಳು ಇರದಿದ್ದರೆ ನಾನ್ ಇನ್ನೂ ಆರಾಮಾಗಿ ಇರ್ತಿದ್ದೆ. ಯಾರಿಗ್ ಬೇಕು ಇಂತಹ ತಲೆ ನೋವು. I hate children’s.” ಎಂದೂ ಮೂಗು ಮುರಿದು ಹೇಳಿದಳು. ಅದಕ್ಕೆ ಅಷ್ಟೇ ತಾಳ್ಮೆಯಿಂದ ಉತ್ತರಿಸಿದ ರಾಮಣ್ಣ -“ನೋಡಿ ಮೇಡಮ್ ನಿಮಗೆ ಮಕ್ಕಳ ಬೆಲೆ ಗೊತ್ತಿಲ್ಲ ಅನ್ಸುತ್ತೆ ಎಷ್ಟೋ ತಂದೆ ತಾಯಂದಿರು ಸಾವಿರಾರು ದೇವಸ್ಥಾನಗಳಿಗೆ ಅಲೆದು ಒಂದು ಮಗುವಿಗಾಗಿ ಬೇಡಿಕೊಳ್ಳುತ್ತಾರೆ,ಆದರೆ ಆ ಭಗವಂತ ಅಂತಹವರಿಗೆ ಮಕ್ಕಳನ್ನು ಕೊಡುವುದಿಲ್ಲ. ಇನ್ನೊಂದು ಕಡೆ ಅಹಂಕಾರದಿಂದ ತುಂಬಿರುವ ನಿಮಗೆ ಇಂತಹ ಮುದ್ದಾದ ಮಕ್ಕಳನ್ನು ಕೊಟ್ಟಿದ್ದಾನೆ. ಮೇಡಮ್ ನನಗೂ ಒಬ್ಬಳು ಮಗಳಿದ್ದಾಳೆ ಅವಳೆ ನನ್ನ ಸರ್ವಸ್ವ ಅವಳಿಗೆ ಟೇಬಲ್ ಮ್ಯಾನರ್ಸ್ ಇರದಿದ್ದರೂ, ನಿಮ್ಮಷ್ಟು ಕಾಮನ್ ಸೆನ್ಸ ಇರದಿದ್ದರೂ, ಅಪ್ಪನನ್ನ ಹೇಗೆ ಪ್ರೀತಿಸಬೇಕು, ಗೌರವಿಸಬೇಕು ಗೊತ್ತಿದೆ. ಮಕ್ಕಳು ದೇವರ ಉಡುಗೊರೆ ಅವರಿಗೆ ಸಾಧ್ಯವಾದಷ್ಟು ಪ್ರೀತಿ ಕೊಡಿ, sorry ಮೇಡಮ್ ನನ್ನ ಮಾತಿಂದ ನಿಮಗೆ ಬೇಜಾರಾಗಿದ್ದರೆ.” ಎಂದು ರಾಮಣ್ಣ ಅಲ್ಲಿಂದ ಹೊರಟು ಹೋದ ಆದರೆ ಅವನು ಅಲ್ಲಿ ದೊಡ್ಡ ಸಂದೇಶವನ್ನು ಬಿಟ್ಟು ಹೋಗಿದ್ದ.
ಸಿರಿವಂತಿಕೆಯ ಅಮಲಿನಲ್ಲಿ ತೆಲುತ್ತಿದ್ದ ಆಕೆ, ಹೃದಯ ಸಿರಿವಂತಿಕೆ ಇರುವ ರಾಮಣ್ಣನಿಂದ ಅಂದು ಬದುಕಿಗೊಂದು ಪಾಠವನ್ನು ಕಲಿತಿದ್ದಳು…
-ರಾಜೇಶ ಎಸ್ ಜಾಧವ , ಬಾಗಲಕೋಟ.