ಇಳೆಯ ನೋವು
ಏಕೆ ಪ್ರಕೃತಿ ಮುನಿದು ಕೊಂಡಿತೊ ಧರೆಯ ಸ್ವರ್ಗದ ಸಿರಿಯೊಳೂ..!
ಸ್ವಾಭಿಮಾನದ ನಾಡು ಕೊಡವರ ಗಿರಿಯ ಸೊಬಗಿನ ನೆಲೆಯೊಳೂ… !!
ರುದ್ರತಾಂಡವ ವರುಣ ನರ್ತನ ಎಲ್ಲ ನೋಡಲು ಜಲಪ್ರಳಯವೂ…!
ಯಾರ ಪಾಪದ ಫಲವೊ ಏನೋ ಭುವಿಗೆ ತಟ್ಟಿದೆ ಶಾಪವೂ..!!
‘
ನೊಂದ ಜೀವದ ಕಣ್ಣನೊರೆಸುತ ಮನವು ನೋವಲಿ ಮಿಡಿವುದೂ..!
ಕೆಟ್ಟ ರಕ್ಕಸ ಬಿರುಗಾಳಿ ಮಳೆಗೇ..,ಇಳೆಯ ಬೇಗುದಿ ಕಾಣದೂ..!!
ಏನು ಮಾಡಲು ಏನು ಹೇಳಲು ಭೂಮಾತೆ ಹೃದಯವೆ ಒಡೆದಿದೇ…!
ಭೂರಮೆಯೆ ಪ್ರಳಯಕೆ ನಲುಗಿ ಹೋಗಿದೆ,ಏನು ಮಾಡಲು ತೋಚದೇ..!!
‘
ಮುನಿದ ಪ್ರಕೃತಿ ಎದುರು ನಿಲ್ಲುವ ಧೈರ್ಯ ಯಾರಿಗು ಸಾಲದೇ..!
ಯಾರೇ ಬಂದರು ಯಾರೇ ಹೋದರು ಬದುಕಲಲ್ಲೇ ನುಳಿದಿದೇ..!!
ಎಲ್ಲ ಕರಗಿತು ಕಣ್ಣ ಮುಂದೆಯೆ ಬದುಕಿನಯಿಸಿರಿ ಜಲದಲೀ..!
ಇನ್ನು ಬಾಳುವ ಉಳಿದ ಜೀವನ ನಮ್ಮ ಅಹಮಿಕೆ ಬಿಡುತಲೀ..!!
‘
ಮೇಲುಕೀಳೆನುವ ಭ್ರಮೆಯನು ತೊರೆದು ಬಾಳುವ ಬದುಕನೂ..!
ಮೇಲುಕೀಳೆನುವ ಭ್ರಮೆಯನು ತೊರೆದು ಬಾಳುವ ಬದುಕನೂ..!
ಹೊಸತು ಸ್ವರ್ಗವ ಸೃಷ್ಟಿ ಮಾಡುವ ಎಲ್ಲ ಮರೆಯುವ ನೋವನೂ..!!
ಸಹನೆ ಪ್ರೀತಿ ವಿಶ್ವಾಸದಿಂದಲಿ ಹೊಸತು ನಾಡನು ಕಟ್ಟುವಾ.. !
ಶ್ರಮದಿ ದುಡಿಯುತ ಹಿರಿಮೆಯಿಂದಲಿ,ಭೂಮಾತೆ ಒಡಲನು ತಣಿಸುವಾ…. !!
-ಪ್ರಮೀಳ ಚುಳ್ಳಿಕಾನ.
,
” ಸುರಹೊನ್ನೆ ” ಭುವಿವಳಗಿನ ಸುರ ಲೋಕದ ಅಳಲನ್ನು ಎಚ್ಚರಿಕೆ ಘಂಟೆಯಾಗಿ ಕವನದಲ್ಲಿ , ಚೊಕ್ಕದಾಗಿ ಹೊರಹೊಮ್ಮಿದೆ !!!
ವಾವ್…ಬಾರಿ ಲಾಯಿಕ ಆಯ್ದು….೪ ಸರ್ತಿ ಓದಿದೆ….ತುಂಬ ಅರ್ಥಪೂರ್ಣವಾಗಿ ಇದ್ದು….
ವಾವ್, ಮಳೆಯ ರುದ್ರ ನರ್ತನದ ನೋವನ್ನು ಹಾಡಿನ ಮೂಲಕ ಹಂಚಿಕೊಂಡ ತಂಗೀ
ಏನು ಹೇಳಲಿ
ಮನುಜನಾಗ್ರಹ
ತಡೆಯದಾಯಿತು ತಾಯಿಗೆ
ಬಾಯಿ ಬಿಟ್ಟಳು, ಪಡೆದಳಾಹುತಿ
ದಮನಿಸಿದಳದೋ ಮನುಜದರ್ಪವ
ನನ್ನ ಮುಂದೆ ಸಮಾನರೆಲ್ಲರು
ಲೋಕ ನೀತಿಯ ದಾಟಬೆಡ
ಎಂಬ ನ್ಯಾಯವ ಇತ್ತಳು.
…….ಸಂತ್ರಸ್ಥರ ಕ್ಷಮೆ ಕೋರುತ್ತಾ.
ಸಕಾಲಿಕ ಕವನ ಚೆನ್ನಾಗಿ ಮೂಡಿಬಂದಿದೆ. ನಮ್ಮ ಪ್ರೀತಿಯ ಕೊಡಗು ಬೇಗನೆ ಮೊದಲಿನಂತಾಗಲಿ ಎಂದು ಮನದುಂಬಿ ಹಾರೈಸುವೆ .
ಒಳ್ಳೆಯ ಕವನ. ಭೂ ಸ್ವರ್ಗದಂತಿದ್ದ ಕೊಡಗು ಪ್ರಕೃತಿಯ ಮುನಿಸಿನಿಂದ ನಾಶವಾಗುತ್ತದಲ್ಲ, ಅದನ್ನು ಪುನರ್ ನಿರ್ಮಾಣ ಕಾರ್ಯ ಇನ್ನೂ ಆಗಬೇಕು.