ವ್ಯಾಕ್ಯೂಮ್ ಕ್ಲೀನರ್
ಮನೆ, ಕಚೇರಿ, ಅಂಗಡಿ, ಆಸ್ಪತ್ರೆ, ಹೀಗೆ ವಿವಿಧ ಕಡೆ ವ್ಯಾಕ್ಯೂಮ್ ಕ್ಲೀನರ್ ಬಳಕೆ ಜನಪ್ರಿಯವಾಗುತ್ತಿದೆ. ಈ ವ್ಯಾಕ್ಯೂಮ್ ಕ್ಲೀನರ್ ಕುರಿತು 5 ಪ್ರಮುಖ ವಿಷಯಗಳು ಹೀಗಿವೆ.
- ವಿಶ್ವದ ಪ್ರಥಮ ವ್ಯಾಕ್ಯೂಮ್ ಕ್ಲೀನರ್ ಅನ್ನು 1860ರಲ್ಲಿ ಡೇನಿಯಲ್ ಹೆಸ್ ಅಭಿವೃದ್ಧಿಪಡಿಸಿದರು. ಕಾರ್ಪೇಟ್‍ಗಳನ್ನು ಸ್ಪಚ್ಛ ಮಾಡಲು ಇದನ್ನು ಬಳಸಲಾಗುತ್ತಿತ್ತು.
- 1901ನಲ್ಲಿ ಹೂಬರ್ಟ ಸೆಸಿಲ್ ಬೂತ್, ಮನೆ ಬಳಕೆಗೆಂದು ವ್ಯಾಕ್ಯೂಮ್ ಕ್ಲೀನರ್ ಅಭಿವೃದ್ಧಿಪಡಿಸಿದರು. ನಂತರದ ದಿನಗಳಲ್ಲಿ ವಿದ್ಯುತ್ ಚಾಲಿತ ವ್ಯಾಕ್ಯೂಮ್ ಕ್ಲೀನರ್ ಗಳನ್ನು ಇವರು ಅಭಿವೃದ್ಧಿಪಡಿಸಿದರು. ಆದರೆ ಬೃಹತ್ ಗಾತ್ರದ ಈ ವ್ಯಾಕ್ಯೂಮ್ ಕ್ಲೀನರ್ ಅನ್ನು ಮನೆಯ ಒಳಗೆ ತಂದು ಬಳಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಈ ಬೃಹತ್ ಕ್ಲೀನರ್ ಅನ್ನು ಮನೆಯ ಹೊರಗಿಟ್ಟು ಅದರಿಂದ ಪೈಪುಗಳನ್ನು ಮನೆಯೊಳಗೆ ತಂದು ಸ್ವಚ್ಛಗೊಳಿಸಲಾಗುತ್ತಿತ್ತು.
- ವಿದ್ಯುತ್ ಮೋಟಾರ್ ಚಾಲಿತ ವ್ಯಾಕ್ಯೂಮ್ ಕ್ಲೀನರ್ ಅನ್ನು 1907ರಲ್ಲಿ ಅಮೇರಿಕಾದ ಜೇಮ್ಸ್ ಮರ್ರೇ ಸ್ಪಾಂಗ್ಲರ್ ಅಭಿವೃದ್ಧಿಪಡಿಸಿದರು. ಇವರಿಂದ ಈ ಉಪಕರಣದ ಪೇಟೆಂಟ್‍ನ್ನು 1908ರಲ್ಲಿ ಖರೀದಿಸಿದ ವಿಲಿಯಮ್ ಹೆನ್ರೀ ಹೂವರ್, 18 ವರ್ಷ ಕಷ್ಟಪಟ್ಟು ಇಂದಿನ ವ್ಯಾಕ್ಯೂಮ್ ಕ್ಲೀನರ್ ಹೋಲುವ ವ್ಯಾಕ್ಯೂಮ್ ಕ್ಲೀನರ್ ಗಳನ್ನು ಅಭಿವೃದ್ಧಿಪಡಿಸಿದರು.
- ಎರಡನೆಯ ವಿಶ್ವ ಯುದ್ಧದ ನಂತರ ಗೃಹಬಳಕೆಗಾಗಿ ವ್ಯಾಕ್ಯೂಮ್ ಕ್ಲೀನರ್ ಗಳ ಬಳಕೆ ಜನಪ್ರಿಯವಾಗತೊಡಗಿತು.
- ಈಗ ರೋಬೋಟ್‍ಗಳು ನಿಯಂತ್ರಿಸುವ ಮತ್ತು ಇಂಟರ್‍ನೆಟ್ ಮೂಲಕ ನಿಯಂತ್ರಿಸ ಬಹುದಾದ ವ್ಯಾಕ್ಯೂಮ್ ಕ್ಲೀನರ್ ಗಳು ಜನಪ್ರಿಯವಾಗುತ್ತಿವೆ.
-ಉದಯ ಶಂಕರ ಪುರಾಣಿಕ