ತೋರಣ
ಸುಳ್ಳಿನ ಮನೆಯಲ್ಲಿ ಸತ್ಯದ ತೋರಣ
ಕಟ್ಟುವ ಭರದಲ್ಲಿ ಭಾವಗಳ ತಲ್ಲಣ
.
ಹತ್ತಿರವು ದೂರವೀಗ, ದೂರವು ಅಂಗೈಲಿ
ಯಾರಿಹರು ನಿನ್ನೊಳಮನೆಯಲಿ? ನಿನ್ನಂತೆ ನೀನಾಗಿ
ಬೆಳಗಲು ಮನೆಯನ್ನು ಇರುವರೆ? ನಿನ್ನವರೆಂದವರು
.
ತೋರಿದಂದವು ಮಿಥ್ಯ ಬಿಂಬ ದರ್ಪಣದಲಿ
ತಿಳಿದಾಗ ಚಲಿಸಿತು ದೂರ ದೂರಕೆ ಮೇಘಗಳು
ಬರುವುದಿಲ್ಲೀಗವರು, ಸಮಯದಿ ಬರುವರು
.
ತೋರಣದ ಅಂದವ ಬಣ್ಣಿಸಲು ಸಾಧ್ಯವೇ?
ಕಟ್ಟು ನೀ ತೋರಣ, ನಡೆಸು ನೀ ಹಬ್ಬವ
.
-ಗೌರೀಶ್ ಅಬ್ಳಿಮನೆ