ಬೆಳಗು ಬಾ ನಂದಾದೀಪವೇ
ಕಟ್ಟಿದೆ ಗುಡಿಸಲಿನ
ಅಂದದ ಅರಮನೆಯ
ಮುಂದೊಂದು ದಿನ
ಎಲ್ಲಾದರೂ ಒಂದೆಡೆ
ಸಿಕ್ಕೆ ಸಿಗುವೆ ಎಂಬ
ಕಲ್ಪನೆಯು ನನಗಿಲ್ಲ
ಕನಸಲೂ ಕಾಡಲಿಲ್ಲ
ಭೂತದ ನೆನಪುಗಳಿಲ್ಲ
ಭವಿಷ್ಯದ ಮೇಲೆ
ಭರವಸೆಯು ದೊರಕದು
ವರ್ತಮಾನದ
ವಾಸ್ತವಕೆ ಮೊರೆ
ಹೊಕ್ಕಿರುವ ಜೀವವಿದು
ಕತ್ತಲೆಯ ಕೋಣೆಗೆ
ಹಣತೆಯ ಹಚ್ಚಿ
ಬೆಳಗು ಬಾ
ನಂದಾದೀಪವೇ
ಜೀವದ ಕೊನೆಯ
ಉಸಿರಿರುವ ತನಕ
– ಶ್ರೀನಿವಾಸ ಕೆ.ಎಮ್