ನಮ್ಮ ಹೆಮ್ಮೆಯ ಕನ್ನಡ ನಾಡು.
ನಮ್ಮ ಹೆಮ್ಮೆಯ ಕನ್ಡಡ ನಾಡು.
ಸುಂದರ ಕಲೆಗಳ ಬೀಡು..ಪ
ಶ್ರೀಗಂಧದಾ ಸಿರಿಯನು ಹೊಂದಿದ ಅಂದದ ಚಂದದ ನಾಡು,
ತುಂಗಾ ಭದ್ರಾ ಕೃಷ್ಣಾ ಕಾವೇರಿ ನದಿಗಳು ಹರಿಯುವ ನಾಡು..1
ಸಾಹಿತ್ಯ ಸಂಗೀತ ಕ್ಷೇತ್ರಕೆ ಮೆರಗನು ನೀಡಿದ ನಾಡು.
ಬೇಂದ್ರೆ ಕುವೆಂಪು ರನ್ನ ಪಂಪರಂಥಾ ಕವಿಗಳು ನೆಲೆಸಿದ ನಾಡು..2
ಕ್ರೀಡಾಕ್ಷೇತ್ರದಿ ಕೀರ್ತಿಯ ತಂದಾ ಕ್ರೀಡಾಪಟುಗಳ ನಾಡು,
ಕಲ್ಲಿನ ಸುಂದರ ಕೆತ್ತನೆ ಹೊಂದಿದ ದೇವಾಲಯಗಳ ಬೀಡು..3
ರಾಷ್ಟ್ರರಕ್ಷಣೆಯಲಿ ಶ್ರೇಷ್ಠತೆ ಮೆರೆದಾ ವೀರಯೋಧರ ಈ ನಾಡು,
ನಾಡಿನ ಜನತೆಗೆ ಅನ್ನವ ಬೆಳೆಯಲು ಶ್ರಮಿಸುವ ರೈತರ ನಾಡು..4
ಸಿದ್ದಾರೂಢ ಶರೀಫರಂತಹಾ ಸಂತರು ನೆಲೆಸಿದ ನಾಡು.
ವಿಶ್ವಮಟ್ಟದಲಿ ಖ್ಯಾತಿಯ ಪಡೆದಾ ವಿಜ್ಞಾನಿಗಳಾ ಬೀಡು..5
ನಮ್ಮ ಹೆಮ್ಮೆಯ ಕನ್ನಡ ನಾಡು….
.
– ಮಾಲತೇಶ , ಹುಬ್ಬಳ್ಳಿ
.