ಹೂ ಮಾರುವ ಹಾ(ಬೀ)ದಿ ಬದಿ
ಹೊಯ್ಯುವ ಮಳೆಯಡಿ
ಹೂವಿನ ರಾಶಿಯಲಿ
ಹೋ(ಹಾ)ರಾಡಿ ಮಾರಿ
ಹಣಗಳಿಸುವವರ ಪಾಡು
ಹುಂಬತನವಲ್ಲವದು
ಹೇಡಿಯಾಗದೇ ಅಲ್ಲಿ
ಹೊಟ್ಟೆಪಾಡಿಗಾಗಿ ಇಟ್ಟ
ಹೆಜ್ಜೆಗಳು ಹೋದ ಹಾದಿ
ಹೆಚ್ಚುಗಾರಿಕೆಯಲ್ಲ
ಹುಚ್ಚುತನವೂ ಇಲ್ಲ
ಹನಿಬೆವರಿನಡಿಯಲಿ
ಹಸಿವು ನೀಗಿಸುವ ಪರಿ
ಹೊತ್ತಿಗಲ್ಲಿನ ಧಾರಣೆ
ಹತ್ತರ ಮೇಲೊಂದಷ್ಟು
ಹತ್ತಿರವಾದವರಿಗಲ್ಲಿ
ಹುಸಿನಗುವೊಳಗಿಷ್ಟ
ಹತ್ತಿಯ ಹಗುರವಲ್ಲವಲ್ಲ
ಹೊತ್ತಿದ್ದೇನೂ ಭಾರವಿಲ್ಲ
ಹೆತ್ತಿದ್ದವರ ಪೊರೆವವರ
ಹುಡುಗರೂ ಇಹರಲ್ಲಿ
ಹಳ್ಳಿಯವರೇನಲ್ಲ
ಹಮ್ಮುಬಿಮ್ಮಗಳಿಲ್ಲ
ಹೂಂಕಾರಗಳೂ ಇಲ್ಲ
ಹರಟೆಗಳಿಗೆ ಬರವಿಲ್ಲ
ಹಂಬಲವಿಲ್ಲಿ ಬದುಕು ಕಟ್ಟಲು
ಹಸಿಬಿಸಿ ಮೈಯೊಳಗಣ ಕಸು
ಹಣಾಹಣಿಗಳಾಗದಿಲ್ಲಿ
ಹಾಲಷ್ಟೆ ಹಾಲಾಹಲವಿಲ್ಲ
– ಗಣೇಶಪ್ರಸಾದ ಪಾಂಡೇಲು