ಮೋಡಗಳಡಿಯಲ್ಲಿ
ಮೋಡಗಳೆಡೆಯ
ಮಿಂಚಿನಾಟದಲಿ
ಮಳೆರಾಯನ ಸಂಚು
ಮುಂಗಾರಿಗೂ ಬರದೇ
ಮರೆಯಾದನಲ್ಲ
ಮೊದಲಿರಲಿಲ್ಲ ಹೀಗೆ
ಮಾಯಗಾರನಾಟ
ಮುದದಿ ಚೆಲ್ಲಿ ನೀರು
ಮೋಹದಾಲಿಂಗನದಿ
ಮನಸೂರೆಗೊಳ್ಳುತ್ರಿದ್ದ
ಮುಗಿಲನೆಡೆ ಹೊಳಪು
ಮುಚ್ಚಿಹೋಗುರ ಕಪ್ಪು
ಮೂಡನು ರವಿಯಲ್ಲಿ
ಮೇಘಗಳಾರ್ಭಟದಿ
ಮಿಸುಕಾಡದ ಮಂದಿ
ಮತ್ತದೇ ನೋಟವಲ್ಲಿ
ಮೇಲಾಟದ ತವಕಕ್ಕೆ
ಮುದುಡಿದಂತಾಗಿ
ಮಾನವೀಯತೆಯ
ಮರೆತ ಘಳಿಗೆ ನೆನಪು
– ಗಣೇಶಪ್ರಸಾದ, ಪಾಂಡೇಲು