ಜನಿಸಿ ಬಂದಿಹೆವಿಲ್ಲಿ…
ಜನಿಸಿ ಬಂದಿಹೆವಿಲ್ಲಿ
ಭರತ ಭೂಮಿಯಲ್ಲಿ
ನಲಿಯುವ ಭಾಗ್ಯ ವಿದಿಲ್ಲಿ
ಭಾರತಮಾತೆಯ ಮಡಿಲಲ್ಲಿ.
ನಲುಗುತಿರಲು ಮಾತೆ
ದುಷ್ಟ ದುರುಳರ ಕರದಿ
ತ್ಯಾಗ ಬಲಿದಾನದಿ ಅವಳ
ಕಾಯ್ದ ಮಹನೀಯರೆಷ್ಟು.
ಭರತ ಭೂಮಿಗೆ ಮುಕ್ತಿ ನೀಡಿದ
ಮಾತೆಯ ಧೀರ ವೀರ ಮಕ್ಕಳ
ನೆನೆಸೋಣ ಅನುದಿನವು
ನಮಿಸೋಣ ಅನವರತವು.
ಹೆತ್ತವ್ವನನು ತೊರೆದು
ಹೊತ್ತವ್ವನ ಸೇವೆಗಾಗಿ
ಜೀವ ತೆತ್ತವರೆಷ್ಟೋ
ಜೀವ ನೀಡುತಿರುವವರೆಷ್ಟೋ.
ನಿತ್ಯ ಪ್ರಾರ್ಥನೆಯಲಿ ಇರಲಿ
ಅವರಿಗೊಂದಿಷ್ಟು ಸಮಯ
ನೀಡಿ ಹೃದಯದಲಿನಿತು ಸ್ಥಾನ
ಹರಸೋಣ ಅವರ ಶ್ರೇಯಸ್ಸಿಗಾಗಿ.
ಸಹಭಾಗಿಯಾಗುತ ಸೇವೆಯಲಿ
ಪಸರಿಸುತ ಸ್ನೇಹ ಸೌಹಾರ್ದತೆಯ
ಮಾಡಿ ಭಾವೈಕ್ಯತೆಯ ಪ್ರತಿಜ್ಞೆಯನು
ಕೃತಾರ್ಥರಾಗೋಣ ನಾವೆಲ್ಲ
ತ್ರಿವರ್ಣ ಧ್ವಜಕಿಂದು ಭಕ್ತಿಯಲಿ ನಮಿಸಿ.
‘
ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು..ವಂದೇ ಮಾತರಂ.
‘
– ಅನ್ನಪೂರ್ಣ,ಬೆಜಪ್ಪೆ.
ಚೆಂದದ ಸಾಲುಗಳು
ಧನ್ಯವಾದ ಅಣ್ಣ
ಚಂದದ ಕಾವ್ಯ
ಧನ್ಯವಾದ
ಅರ್ಥವತ್ತಾದ ಸಾಲುಗಳು.