ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ
ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ
ಇನ್ನೂ ಹೆಚ್ಚಾಗಿ ಎಂದೂ ನಿಮ್ಮ ಪ್ರೀತಿಸಲಿಲ್ಲ ಮಹಾಸ್ವಾಮಿ
ಆ ಸಂಜೆ ನಿಮ್ಮಿಂದ ದೂರಾಗಿ ನಡೆದೆನಲ್ಲ ಆಗಿನಕಿಂತ
ಕಾಡು ನುಂಗಿತ್ತು ನನ್ನ, ನೀಲಿ ಕಾಡು, ಮಹಾಸ್ವಾಮಿ
ನೀಲಿ ಕಾಡು ಮತ್ತು ಮೇಲೆ ಪಶ್ಚಿಮದಲ್ಲಿ ಕಂದಿದ ಚುಕ್ಕಿಗಳು
ನಾನು ನಗಲಿಲ್ಲ,ಚೂರೂ ಇಲ್ಲ, ಮಹಾಸ್ವಾಮಿ
ಒಂದು ಕಾಳ ವಿಧಿಯತ್ತ ಹುಡುಗಾಟದಲ್ಲೇ ನಡೆಯುವಾಗ
ನನ್ನ ಹಿಂದಿದ್ದ ಮುಖಗಳು ಕರಗಿದವು
ನಿಧಾನವಾಗಿ ನೀಲಿಕಾಡಿನ ಸಂಜೆಯಲ್ಲಿ
ಆ ಒಂದು ರಾತ್ರಿ ಎಲ್ಲ ವೈಭವೋಪೇತ, ಮಹಾಸ್ವಾಮಿ
ಆ ಮೇಲೆ ಎಂದೂ ಇಲ್ಲ,ಆ ಮೊದಲೂ ಅಲ್ಲ
ಒಪ್ಪುವೆ : ದೊಡ್ಡ ಹಕ್ಕಿಗಳ ಹೊರತು ನನ್ನಲ್ಲೇನೂ ಉಳಿದಿರಲಿಲ್ಲ
ಮತ್ತು- ಕಪ್ಪು ಸಂಜೆಯ ಆಗಸದಲ್ಲಿ ಅವುಗಳ ಹಸಿವಿನ ಚೀತ್ಕಾರಗಳು..
.
ಮೂಲ-ಬ್ರೆಕ್ಟ್
I Never Loved You More
ಅನು- ಗೋವಿಂದ ಹೆಗಡೆ