ನೊಂದ ಪಂಜರದ ಗಿಣಿ
ನಾನು ಪಂಜರದ ಪಕ್ಷಿ
ಹಾತೊರೆಯುತಿವೆ ಮನ
ಎಷ್ಟು ದಿನ ಬಂಧನದಲಿರುವೆ.!!
ಹೊರ ಜಗವನೊಮ್ಮೆ ನೋಡಿ
ಬಂಜಿಡಿದ ಒಡಲ ಸಡಿಲಗೊಳಿಸಿ
ಬಂದು ಬಿಡುವೆ ಬೇಗ,ಬಿಡಿಸುವೆಯ ನನ್ನ
ಮೂಕ ಪಕ್ಷಿಯ ನರಳು ಕೇಳುವನಾರು
ಬಂಧು ಬಳಗವ ತ್ಯಜಿಸಿ
ನರಳಾಡುತಿಹ ಬಡ ಪಾಪಿ ನಾನು
ಬುದ್ಧಿ ಬಿಟ್ಟು ಬಿಡು..!!
ಒಂದು ಸಾರಿ ನೋಡಿ ಬರಲೇ
ಕಾಯುತಿಹಳು ಎನ್ನ ಜನನಿ
ಹಸಿರಾದ ಹಚ್ಚನೆ ಸೌಂದರ್ಯ
ಕಿತ್ತು ಬಿಡು ನನಗೇತಕೆ ಅಂದ
ಕೆಂಪಾದ ಕೊಕ್ಕುತುದಿ ತರಿದು ಹಾಕು
ನನಗಿಲ್ಲ ಸೊಕ್ಕು,
ಸೀಳಿಬಿಡು ರೆಕ್ಕೆಯ ಹಸಿರು ಬಣ್ಣ,
ನೋಡಿ ಬರುವೇ ನಾ ಹೆತ್ತ ಜನನಿಯ
.
-ಅಫ್ನಾಶ್ಫೀ