ಹೆಮ್ಮರವಾಗುವುದಿಲ್ಲ!
ಎಷ್ಟೊಂದು ಪ್ರೀತಿಸಿದೆವೆಂದರೆ
ಬಂಧಿಸಿಟ್ಟ ಅನುಭವವಾಗಿ
ಸರಳುಗಳ ಕತ್ತರಿಸಿಕೊಳ್ಳಲು ಹರಿತವಾದ ಗರಗಸ
ಅರಸಿ, ಸೋತು
ಮಾತುಗಳನೇ ಬಳಸಿಕೊಂಡೆವು!
ಕತ್ತರಿಸಿಕೊಂಡ ಬಳಿಕ ಸರಳುಗಳ
ನಿರಾಳರಾಗಿ ಬೆಳೆಯುತ್ತ ಹೋದೆವು.
ಪರಸ್ಪರರ ನೆರಳಿನ ನರಳಾಟವಿರದೆ.
ನಿಜ, ನೆರಳಲ್ಲಿ ಬೀಜ ಮೊಳಕೆಯೊಡೆಯುವುದಿಲ್ಲ
ಒಡೆದರೂ ಸಸಿ ಹೆಮ್ಮರವಾಗುವುದಿಲ್ಲ!
– ಕು.ಸ.ಮಧುಸೂದನ ನಾಯರ್ ರಂಗೇನಹಳ್ಳಿ