ಮಾನವೀಯತೆ ಸತ್ತಿತ್ತು
ಎಳೆಯ ಬಾಲೆಯ ಮೇಲೆ
ದುರುಳ ಕಾಮುಕನೆರಗಿ
ಅತ್ಯಾಚಾರಗೈಯುವಾಗ
ಮಾನವೀಯತೆ ಸತ್ತಿತ್ತು
ತನ್ನನ್ನು ನಂಬಿ ಬಂದ
ತನ್ನ ಮನೆ ಬೆಳಗುವವಳನ್ನು
ವರದಕ್ಷಿಣೆಗಾಗಿ ಹಿಂಸಿಸುವಾಗ
ಮಾನವೀಯತೆ ಸತ್ತಿತ್ತು
ಮುದ್ದಿನಿಂದ ಸಲುಹಿದ
ಹೆತ್ತವರ ಮಗ ನಡುರಾತ್ರಿಯಲ್ಲಿ
ನಡುಬೀದಿಗೆ ತಳ್ಳುವಾಗ
ಮಾನವೀಯತೆ ಸತ್ತಿತ್ತು
ಹಸಿವಿನ ಜನ ತತ್ತರಿಸಿರಲು
ಉಳ್ಳವರು ಪ್ರತಿಷ್ಟೆಗಾಗಿ
ಅನ್ನವನು ತೊಟ್ಟಿಗೆಸೆವಾಗ
ಮಾನವೀಯತೆ ಸತ್ತಿತ್ತು
ತನ್ನ ನಂಬಿದ ಜೀವವನ್ನು
ಬಾಯಿ ಚಪಲಕ್ಕಾಗಿ
ದೇವರ ಹೆಸರಲ್ಲಿ ಬಲಿ ನೀಡುವಾಗ
ಮಾನವೀಯತೆ ಸತ್ತಿತ್ತು
ಅಸಹಾಯಕರ ಮೇಲೆ
ಅಟ್ಟಹಾಸ ಮೆರೆದು
ಅವಹೇಳನಗೈಯ್ಯುವಾಗ
ಮಾನವೀಯತೆ ಸತ್ತಿತ್ತು
– ಅಮು ಭಾವಜೀವಿ