ಹೊಳೆಯ ಹಾಡು
ಹರಿಯುತಲರಿಯುತಾ ನದಿಯ ಓಟ
ಕತ್ತಲಾದರೂ ಬಿಡುವಿಲ್ಲದ ನಾಟ್ಯ
ಇಕ್ಕೆಲಗಳಲ್ಲೂ ಕಪ್ಪೆಗಳ ಮೃದಂಗವಾಯನ
ಜಲ ಜೀವರಾಶಿಗಳ ಕರತಾಡನ . . .
ಹೊಳೆಯ ಗೆಳೆತನ ಇಳೆಯೊಡನೆ
ಹೊಳೆಯ ಸೆಳೆತವು ಮಳೆಯೊಡನೆ
ಸುಗಂಧ ಗಾಳಿಯು ಚಾಮರ ಬೀಸಲು
ಕಾವಲಿಗೆಂದು ಚಂದ್ರನು ಮೀಸಲು
ಜೋಡಿಹಕ್ಕಿಗಳ ಪಿಸುಮಾತುಗಳು
ಕನಸ್ಸ ಕಾಣುವ ಜೀವಚರಗಳು
ಹೊಳೆಯ ಹಾಡವಕೆ ಮತ್ತೇರಿಸಲು
ಬೆಳದಿಂಗಳೊದಿಕೆಯಡಿ ಮುತ್ತಿಡಲು
ಒಡಲೊಳಗಿರುವ ಜೀವಿಗಳೊಡನೆ
ಹಾಡನು ಹೇಳಿ ನೃತ್ಯವ ಮಾಡುತಾ
ಹೊಳೆ ಹೊಳೆಯುತ್ತಿದೆ ಕಾರ್ತಿಕ ಬೆಳಕಿನಲಿ
ಹೊಳೆ ಹರಿಯುತ್ತಿದೆ ನಿತ್ಯ ಪುಳಕದಲಿ . . .
– ಸುನೀತಾ, ಕುಶಾಲನಗರ