ಬೆಳಕು
ಎಲ್ಲಿ ಬೆಳಕು… ಬೆಳಕು ಎಲ್ಲಿ….?
ಮೋಡ ಕವಿದ ಧರೆಯ ಮೇಲೆ
ಧಾರೆ ಮಳೆ ಆಗುವಲ್ಲಿ
ನದಿಯು ಭರದಿ ಹರಿದು ಕೂಡ
ದೋಣಿ ದಡಕೆ ಸಾಗುವಲ್ಲಿ
ಒಳಹೊರಗಿನ ಮಲಿನ ತೊಲಗಿ
ಶುದ್ಧ ಗಾಳಿ ಬೀಸುವಲ್ಲಿ
ವಿಕೃತಿ ಅಳಿದು ತೊಳೆದು
ಪ್ರಕೃತಿ ಹೊಸತ ತೋರುವಲ್ಲಿ
ತುಡಿವ ದುಡಿವ ಕಾಯಗಳಿಗೆ
ಸುಖ ಸಂಪದ ಹಾಸಿನಲ್ಲಿ
ಕೃದ್ಧತೆಯ ಆಳ ಹುಗಿದು
ಪ್ರಭುದ್ಧತೆಯ ಮೆರೆಯುವಲ್ಲಿ
ಅಸುರ ನೀತಿ ಪೂರ್ಣ ತೊಲಗಿ
ಸಾಮರಸ್ಯ ಸೇರುವಲ್ಲಿ
ಶೋಷಣೆಯ ಕಪ್ಪು ಕಳೆದು
ಸಮಾನತೆಯು ಹಾಡುವಲ್ಲಿ
ಹಸಿರ ಉಸಿರ ಉಳಿಸಿ ಬೆಳೆಸಿ
ಜೀವ ಜತನವಾಗುವಲ್ಲಿ
ಸತ್ಯ ನಿತ್ಯ ಹೊಳೆದು
ಮಿಥ್ಯೆ ಮಂಡಿ ಊರುವಲ್ಲಿ
ಜಡತೆ ಜೊಂಪು ಜರಿದು
ಅರಿವು ಜೀವ ತಳೆವಲ್ಲಿ
ಭೂಮಿ ಹೃದಯ ಅರಳಿ
ಭಾಗ್ಯದಾತೆಯಾಗುವಲ್ಲಿ
ಇಲ್ಲಿ ಬೆಳಕು…. ಬೆಳಕು ಇಲ್ಲಿ….
– ಅನಂತ ರಮೇಶ್
ಸಾಂದರ್ಭಿಕ ಕವನ ಚೆನ್ನಾಗಿದೆ..
ಧನ್ಯವಾದಗಳು.
ಕವನದ ಬೆಳಕು ಚೆನ್ನಾಗಿ ಪ್ರಜ್ವಲಿಸಿದೆ..!!
ಮೆಚ್ಚುಗೆಗೆ ಧನ್ಯವಾದಗಳು.
ವಂಡರ್ಫುಲ್ ಥಾಟ್ಸ್ ರಮೇಶ್ ! !!
ಕವನ ತುಂಬ ಅರ್ಥಗರ್ಭಿತ ವಾಗಿದೆ.ತುಂಬ ಇಷ್ಟ ಆಯಿತು
ಮಂಜುನಾಥ್ ಕರುಣಾಕರ್
ಮತ್ತುಮ್ಮೆ ನಿಮ್ಮೆಲರಿಗೂ ಬೆಳಕಿನ ಹಬ್ಬ ದೀಪಾವಳಿ ಶುಭಾಶಯಗಳು.
ಧನ್ಯವಾದಗಳು ಮಂಜುನಾಥ್. ನಿಮಗೂ ಹಬ್ಬದ ಶುಭಾಶಯಗಳು.