ಪ್ರೀತಿಯ ಹೆಗ್ಗುರುತು
ನಾನಿರುವ ಹೆಗ್ಗುರುತು
ನಿನ್ನ ಈ ಪ್ರೀತಿ
ನನ್ನ ಸಾಧನೆಯ ಪ್ರತೀಕ
ನೀನೇ ತಾನೇ ಓ ಸಂಗಾತಿ
ನನ್ನೆಲ್ಲಾ ನೋವಿಗೆ ಹೆಗಲಾದೆ
ನಿನ್ನ ಮಡಿಲಲಿ ನಾ ಮಗುವಾದೆ
ನನ್ನಲಿ ನೀ ಕನಸ ಬಿತ್ತಿದೆ
ಅದೀಗ ಹೆಮ್ಮರವಾಗಿ ನಿಂತಿದೆ
ಬದುಕ ಬೇಸರಕೆ ನೀ ಆಸರೆ
ನಿನ್ನ ಒಲವ ನೆರಳಲಿ ನಾ ಕೈಸೆರೆ
ಬೇಕಿಲ್ಲ ನನಗಿನ್ನೇನು ನಿನ್ನ ಹೊರತು
ಬಾಳ ದೂಡುವೆ ನಾ ನಿನ್ನ ಕಲೆತು
ನಿನ್ನ ನಗುವೇ ನನ್ನ ಪ್ರೇರಣೆ
ನಿನ್ನ ನೆನಪೇ ನನ್ನ ಆರಾಧನೆ
ಬದುಕು ಬರಿದಲ್ಲ ಇನ್ನು
ಬೇಡೆನು ನಿನ್ನ ಬಿಟ್ಟು ಬೇರೇನು
ಸಾರ್ಥಕತೆಯ ಅರ್ಥ ನೀನು
ಸ್ವಾರ್ಥವಿರದ ಪಾತ್ರ ನಿನ್ನದು
ಜನುಮ ಜನುಮಗಳ ನಂಟು
ನನ್ನ ನಿನ್ನ ಬೆಸೆದ ಬ್ರಹ್ಮ ಗಂಟು
– ಅಮುಭಾವಜೀವಿ