ಅಭ್ಯಂಗ – ಎಣ್ಣೆ ಸ್ನಾನ
ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ಆತ್ಯಂತ ಮಹತ್ವವಿದೆ. ಶರೀರಕ್ಕೆ ಯಾವುದಾದರೂ ಸ್ನೇಹಾದಿ ತೈಲವನ್ನು ಹಚ್ಚಿ ಮೃದುವಾಗಿ ತೀಡುವುದಕ್ಕೆ ಅಭ್ಯಂಗವೆಂದು ಹೇಳುತ್ತಾರೆ.ಇದು ಶಿಶುವಿನಿಂದ ವೃದ್ಧರತನಕ ವಯೊಮಿತಿಯಿಲ್ಲದೆ ಎಲ್ಲರೂ ಅನುಸರಿಸಬಹುದಾದಂತಹ ಸರಳ ವಿಧಾನವಾಗಿದೆ. ಆಭ್ಯಂಗವು ಸ್ವಸ್ಥರ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ರೋಗಿಗಳ ನೋವನ್ನು ನಿವಾರಿಸುತ್ತದೆ. ನಿತ್ಯವೂ ಅಭ್ಯಂಗ ಮಾಡುವುದರಿಂದ ದೇಹಾಯಾಸ, ಮುಪ್ಪು, ಶ್ರಮ, ವಾತಕೋಪ ದೂರವಾಗಿ ದೇಹಪುಷ್ಟಿ ,ಆಯುವೃದ್ಧಿ,ಸುಖನಿದ್ರೆ ಹಾಗೂ ಚರ್ಮದಮೃದುತ್ವವು ಲಭ್ಯವಾಗುವುದು.ಇದಕ್ಕೆ ಪೂರಕವಾಗಿ ಇತ್ತೀಚಿನ ಆಧುನಿಕ ಸಂಶೋಧನೆಗಳೂ ಇದನ್ನು ಪುಷ್ಟೀಕರಿಸುತ್ತವೆ.
ಅಭ್ಯಂಗಕ್ಕೆ ಉಪಯೋಗಿಸಬಹುದಾದ ದ್ರವ್ಯಗಳು: ಆರೋಗ್ಯವಂತರು ಕೇವಲ ತೆಂಗಿನ ಎಣ್ಣೆ,ತುಪ್ಪ ಅಥವಾ ಎಳ್ಳ್ಳೆಣ್ಣೆಯನ್ನು ಬಳಸಬಹುದು. ರೋಗಿಗಳಲ್ಲಿ ಆಯಾ ರೋಗಕ್ಕನುಸಾರವಾಗಿ ಗಿಡಮೂಲಿಕೆಗಳಿಂದ ಸಂಸ್ಕರಿತ ತೈಲಗಳನ್ನು ಉಪಯೋಗಿಸಬಹುದಾಗಿದೆ. ಶಿಶುಗಳಿಗೆ ತುಪ್ಪ, ಬಲಾ ತೈಲ, ಚಂದನ ಬಲಾ ಲಾಕ್ಷಾದಿ ತೈಲ, ಬಲಾಶ್ವಗಂಧ ತೈಲಗಳನ್ನು ಬಳಸಬಹುದು.
ಅಭ್ಯಂಗವನ್ನು ಯಾರು ಮಾಡಬಾರದು? (ನಿಷಿದ್ಧರು):-ಜ್ವರ, ಅಜೀರ್ಣ, ಕಫ ಸಂಬಂಧೀ ವ್ಯಾಧಿಗಳಿಂದ ಪೀಡಿತರು ಹಾಗೂ ಪಂಚಕರ್ಮ ಚಿಕಿತ್ಸೆಗೊಳಪಟ್ಟವರು ನಿರ್ದಿಷ್ಟ ಸಮಯದವರೆಗೆ ಅಭ್ಯಂಗ ಮಾಡಬಾರದು.
ವಿಧಾನ: ಎಣ್ಣೆಯನ್ನು ಲಘುವಾಗಿ ಬಿಸಿಮಾಡಿ (ಎಣ್ಣೆಯನ್ನು ನೇರವಾಗಿ ಬಿಸಿಮಾಡಬಾರದು.ಒಂದು ಸಣ್ಣಪಾತ್ರೆಗೆ ಎಣ್ಣೆ ಸುರಿದು ಅದನ್ನು ಬಿಸಿನೀರಿನಲ್ಲಿಡಬೇಕು) ತಲೆಯಿಂದ ಕಾಲಿನವರೆಗೂ ಹಚ್ಚಬೇಕು. ನಂತರ ಮೃದುವಾಗಿ ಶರೀರದ ರೋಮದ ದಿಕ್ಕಿಗನುಗುಣವಾಗಿ ತೀಡಬೇಕು (ವಿಲೋಮಗತಿಯಿಂದ ತೀಡಬಾರದು). ಸಾಮಾನ್ಯವಾಗಿ ಹತ್ತರಿಂದ ಇಪ್ಪತ್ತು ನಿಮಿಷಗಳವರೆಗೆ ಎಣ್ಣೆಯನ್ನು ಉಜ್ಜಬಹುದು.ನಂತರ ಒಂದು ಗಂಟೆಯ ಅವಧಿ ಹಾಗೆಯೇ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡಬೇಕು.
ಉಪಯೋಗಗಳು: ಮೇಲೆ ತಿಳಿಸಿದ ಎಲ್ಲಾ ಲಾಭಗಳು ಜೊತೆಗೆ ಶಾರೀರಿಕ ನೋವು ದೂರವಾಗುವುದಲ್ಲದೆ ಮನಸ್ಸೂ ಕೂಡ ಉಲ್ಲಸಿತವಾಗುತ್ತದೆ.
ಇಂದಿನ ದಿನಗಳಲ್ಲಿ ದೀಪಾವಳಿಯ ನರಕಚತುರ್ದಶಿಯಂದು ಮಾತ್ರ ಶಾಸ್ತ್ರಕ್ಕಾಗಿ ಎಣ್ಣೆ ಸ್ನಾನ ಮಾಡುವುದನ್ನು ಕಾಣುತ್ತೇವೆ. ಅವಸರದ ಜೀವನ ಶೈಲಿಯಲ್ಲಿ ದಿನನಿತ್ಯ ಇದನ್ನು ಅಳವಡಿಸಿಕೊಳ್ಳುವುದೂ ಕಷ್ಟ.
ವಾರಕ್ಕೊಮ್ಮೆಯಾದರೂ ಅಭ್ಯಂಗವನ್ನು ರೂಢಿಸಿಕೊಳ್ಳುವುದು ದೇಹ ಹಾಗೂ ಮನಸ್ಸುಗಳೆರಡಕ್ಕೂ ಉತ್ತಮ.
– ಡಾ.ಹರ್ಷಿತಾ ಎಂ.ಎಸ್
ಉತ್ತಮ ಮಾಹಿತಿ, ಧನ್ಯವಾದಗಳು .
ಥಾಂಕ್ ಯು
Very good information. Keep writing such articles. ☺
ಧನ್ಯವಾದಗಳು…
ಒಳ್ಳೆಯ ಸಲಹೆ ಧನ್ಯವಾದಗಳು
ಧನ್ಯವಾದಗಳು
ಉತ್ತಮ ಮಾಹಿತಿ ಧನ್ಯವಾದಗಳು
ಧನ್ಯವಾದಗಳು
Nice Harshitha.Simple and informative.
Dhanyavaadagalu
ಡಾಕ್ಟ್ರೇ ನಿಜಕ್ಕೂ ಉತ್ತಮ ಲೇಖನ.. ಹಾಟ್ಸಾಫ್
Dhanyavaadagalu
ಉತ್ತಮ ಮಾಹಿತಿ.
ಹೊಸದಾಗಿ ತಿಳಿದುದು;-
ಎಣ್ಣೆಯನ್ನು ನೇರವಾಗಿ ಬಿಸಿ ಮಾಡಬಾರದು
ವಿರುದ್ಧ ದಿಕ್ಕಿನಲ್ಲಿ ಉಜ್ಜಬಾರದು
ಮಾಹಿತಿಗೆ ಧನ್ಯವಾದಗಳು
Dhanyavaadagalu
ಉಪಯುಕ್ತ ಮಾಹಿತಿಗೆ ಧನ್ಯವಾದಗಳು…
ಅಗತ್ಯ ಮಾಹಿತಿಯನ್ನೆಲ್ಲ ನಮ್ಮಂತಹ ಸಾಮಾನ್ಯ ಓದುಗರೂ ನೆನಪಿನಲ್ಲಿಟ್ಟಕೊಳ್ಳುವಂತಿದೆ ಈ ಚುಟುಕಾದ ಲೇಖನ. ಬರಹ ತುಂಬ ಇಷ್ಟವಾಯಿತು, ಹರ್ಷಿತಾ 🙂
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು..
Supper thanks a lot doctor
Good message..
Good message