ಬಾರೋ ಚಂದಿರ
ಬಾ ಬಾರೋ ಚಂದಿರ
ನೀನೆಷ್ಟು ಸುಂದರ
ತಾರೆ ಜೊತೆ ಸೇರುವೆ
ಇರುಳ ಬೀದಿ ಬೆಳಗುವೆ
ಮುದ್ದು ಕಂದನ ರಮಿಸುವೆ
ಪ್ರೇಮ ವಿರಹಿಯ ಸಂತೈಸುವೆ
ಮೋಡದ ಹಿಂದೆ ಓಡುವೆ
ತಿಂಗಳಿಗೊಮ್ಮೆ ಎಲ್ಲಿಗೋಗುವೆ
ನೈದಿಲೆಗೆ ನೀನಿಷ್ಟ
ನಿನ್ನೊಲವು ಬಲು ಸ್ಪಷ್ಟ
ಅದಕೆ ನೀನೆಲ್ಲರ ಪ್ರಿಯ
ನಿನ್ನೊಳಿಲ್ಲ ಸಂಶಯ
ಚಂದ ನಿನ್ನ ವದನ
ಸೆಳೆವುದೆಮ್ಮ ಗಮನ
ಹಿತವು ನಿನ್ನ ಸ್ನೇಹ
ನಾ ಸೇರಲು ಆ ಸಮೂಹ
ಇರುಳ ಬಾನ ಹೂವು
ತಂಪು ನಿನ್ನ ಸನಿಹವು
ಸಾಗರನ ಪ್ರಿಯ ಸಖ
ಮುದ್ದು ಮುದ್ದು ಮುಖ
– ಅಮು ಭಾವಜೀವಿ
.