ನೀನು ಸುಖಿಯೆ?
ಚಿಂತೆಯಲಿ ಮುಳುಗಿರುವೆ ಯಾಕೆನ್ನ ಸಖಿಯೆ
ವಂಚಿಸದೆ ಹೇಳಿಂದು ನೀ ನಿಜಕು ಸುಖಿಯೆ.
ಮೀರದಿದ್ದರು ನೀನು ಭಾವದಂಚು
ಏತಕಾಯಿತು ಬಾಳು ಹಿಂಚುಮುಂಚು?
ಶೂನ್ಯದೊಳಹೊಗಲು ನಡೆಸಿದರು ಸಂಚು
ಹಾಕಿಹುದು ವಿಭ್ರಮೆಯ ಪರದೆ ಹೊಂಚು.
ಕಲ್ಪದಲಿ ಕಂಡಿದ್ದರೂನು ಸುಳಿವು
ಕಾಣದಾಯ್ತಲ್ಲ ನಿಜದಲ್ಲಿ ಹಳುವು.
ಶಶಿತಾರೆಯಾದಂತೆ ಇಂದು ಕಳವು
ಸೆರೆಮನೆಯ ವಾಸವದು ಕೆಸರ ಕೊಳವು.
ಎದೆ ಬಿರಿದರೂ ಇಲ್ಲ ಇಲ್ಲಿ ನೆಳಲು
ಕೆಳಗದೋ ಬಿಸಿಯುಸಿರ ಉರಿವ ಮಳಲು
ಒಣನದಿಯು ಕೇಳುವುದೆ ನಿನ್ನ ಅಳಲು?
ಆಸರೆಗೆ ಒಂದಿಲ್ಲ ಮರದ ಬಿಳಲು.
– ಮೋಹಿನಿ ದಾಮ್ಲೆ
ಭಾವಪೂರ್ಣ , ಪ್ರಾಸಬದ್ಧ ಕವನ…. ಸೊಗಸಾಗಿದೆ.
ಧನ್ಯವಾದಗಳು
ವಸುಮತಿ ಆರ್.ಚಂದ್ರ ನಿಮ್ಮೆಲ್ಲಾ ಕವನಗಳೂ ಅದ್ಭುತವಾಗಿರುತ್ತವೆ.. ಮತ್ತೆ ಮತ್ತೆ ಓದಬೇಕನಿಸುತ್ತೆ
ಧನ್ಯವಾದಗಳು